Bangalore Rain: ಬೆಂಗಳೂರಿನ ಶಿವಾನಂದ ವೃತ್ತದಲ್ಲಿ ನದಿಯಂತೆ ಹರಿದ ಮಳೆ ನೀರು
Bangalore news: ನಗರದಲ್ಲಿ ಸುರಿದ ಭಾರೀ ಮಳೆಗೆ ಶಿವಾನಂದ ವೃತ್ತದಲ್ಲಿ ನದಿ ನೀರಿನಂತೆ ಮಳೆ ನೀರು ಹರಿದು ಹೋಗಿದೆ. ರೈಲ್ವೆ ಅಂಡರ್ಪಾಸ್ ಜಲಾವೃತವಾಗಿ ಸವಾರರು ಪರದಾಡುವಂತಾಯಿತು.
ಬೆಂಗಳೂರು: ಬೆಂಗಳೂರಿನಲ್ಲಿ ಮಹಾಮಳೆಗೆ (Bangalore Rain) ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದು, ಶಿವಾನಂದ ವೃತ್ತದಲ್ಲಿ ನದಿಯಂತೆ ಮಳೆ ನೀರು ಹರಿದುಹೋಗಿದೆ. ಇನ್ನೊಂದೆಡೆ ರೈಲ್ವೆ ಅಂಡರ್ಪಾಸ್ ಜಲಾವೃತಗೊಂಡಿದ್ದು, ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣ ಬಳಿ, ವಿಲ್ಸನ್ಗಾರ್ಡನ್ ರಸ್ತೆಗಳಲ್ಲಿ ನೀರು ತುಂಬಿದ ಹರಿದಿದೆ. ಇದರಿಂದಾಗಿ ವಾಹನ ಸವಾರರ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಯಿತು. ಅಲ್ಲದೆ ಸೇಂಟ್ ಜೋಸೆಫ್ ಕಾಲೇಜು ಬಳಿ ರಸ್ತೆಗಳು ಜಲಾವೃತಗೊಂಡು ಫುಟ್ಪಾತ್ ಮಟ್ಟಕ್ಕೆ ನೀರು ಹರಿದಿದೆ. ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಪರದಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Oct 20, 2022 07:54 AM
Latest Videos