ಕ್ಲೀನ್ ಸ್ವೀಪ್… ಅಫ್ಘಾನಿಸ್ತಾನ್ ತಂಡಕ್ಕೆ ಭಾರೀ ಮುಖಭಂಗ..!
Afghanistan vs Bangladesh: ಈ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ತಂಡವು 18 ಓವರ್ಗಳಲ್ಲಿ 144 ರನ್ ಬಾರಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ನಡೆದ ಮೊದಲ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವು 4 ವಿಕೆಟ್ಗಳ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಪಂದ್ಯದಲ್ಲಿ ಅಫ್ಘಾನ್ ಪಡೆ 2 ವಿಕೆಟ್ಗಳ ಸೋಲನುಭವಿಸಿತ್ತು.
ಏಷ್ಯಾದ 2ನೇ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದ ಅಫ್ಘಾನಿಸ್ತಾನ್ ತಂಡವು ಬಾಂಗ್ಲಾದೇಶ್ ವಿರುದ್ಧ ಹೀನಾಯವಾಗಿ ಸರಣಿ ಸೋತಿದೆ. ಅದು ಸಹ ಮೂರು ಪಂದ್ಯಗಳಲ್ಲೂ ಪರಾಜಯಗೊಳ್ಳುವ ಮೂಲಕ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಸರಣಿಯ ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 143 ರನ್ ಕಲೆಹಾಕಿದ್ದರು.
ಈ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ತಂಡವು 18 ಓವರ್ಗಳಲ್ಲಿ 144 ರನ್ ಬಾರಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ನಡೆದ ಮೊದಲ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವು 4 ವಿಕೆಟ್ಗಳ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಪಂದ್ಯದಲ್ಲಿ ಅಫ್ಘಾನ್ ಪಡೆ 2 ವಿಕೆಟ್ಗಳ ಸೋಲನುಭವಿಸಿತ್ತು. ಇದೀಗ ಮೂರನೇ ಪಂದ್ಯದಲ್ಲೂ ಗೆಲ್ಲುವ ಮೂಲಕ ಬಾಂಗ್ಲಾದೇಶ್ ತಂಡವು ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.
ಅಫ್ಘಾನಿಸ್ತಾನ್ ಪ್ಲೇಯಿಂಗ್ 11: ಸೇದಿಕುಲ್ಲಾ ಅಟಲ್ , ಇಬ್ರಾಹಿಂ ಝದ್ರಾನ್ , ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್) , ವಫಿಯುಲ್ಲಾ ತಾರಖಿಲ್ , ದರ್ವಿಶ್ ರಸೂಲಿ , ಅಝ್ಮತ್ ಒಮರ್ಝಾಹಿ , ಮೊಹಮ್ಮದ್ ನಬಿ , ರಶೀದ್ ಖಾನ್ (ನಾಯಕ) , ಅಬ್ದುಲ್ಲಾ ಅಹ್ಮದ್ಝಾಹಿ , ಮುಜೀಬ್ ಉರ್ ರಹಮಾನ್ , ಬಶೀರ್ ಅಹ್ಮದ್.
ಬಾಂಗ್ಲಾದೇಶ್ ಪ್ಲೇಯಿಂಗ್ 11: ತಂಝಿದ್ ಹಸನ್ ತಮೀಮ್ , ಪರ್ವೇಝ್ ಹೊಸೈನ್ ಎಮೋನ್ , ಸೈಫ್ ಹಾಸನ್ , ಜಾಕರ್ ಅಲಿ (ನಾಯಕ) , ಶಮೀಮ್ ಹೊಸೈನ್ , ನೂರುಲ್ ಹಸನ್ , ನಸುಮ್ ಅಹ್ಮದ್ , ಮೊಹಮ್ಮದ್ ಸೈಫುದ್ದೀನ್ , ರಿಶಾದ್ ಹೊಸೈನ್ , ಶೋರಿಫುಲ್ ಇಸ್ಲಾಂ , ತಂಝಿಮ್ ಹಸನ್ ಸಾಕಿ.
