ಮೈದಾನದಲ್ಲೇ ಕಿತ್ತಾಡಿಕೊಂಡ ಭಾರತೀಯ ಆಟಗಾರರು..!
Vidarbha vs Rest of India, Irani Cup: ಈ ಪಂದ್ಯದಲ್ಲಿ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ವಿದರ್ಭ ತಂಡವು 342 ರನ್ ಕಲೆಹಾಕಿದರೆ, ಶೇಷ ಭಾರತ ತಂಡವು 214 ರನ್ಗಳಿಗೆ ಆಲೌಟ್ ಆಯಿತು. ದ್ವಿತೀಯ ಇನಿಂಗ್ಸ್ನಲ್ಲಿ ವಿಧರ್ಭ 232 ರನ್ ಕಲೆಹಾಕಿತು. ಅದರಂತೆ ಕೊನೆಯ ಇನಿಂಗ್ಸ್ನಲ್ಲಿ 361 ರನ್ಗಳ ಗುರಿ ಪಡೆದ ಶೇಷ ಭಾರತ ತಂಡವು 267 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ವಿದರ್ಭ ತಂಡವು 93 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಇರಾನಿ ಕಪ್ ಪಂದ್ಯದ ವೇಳೆ ಭಾರತೀಯ ಆಟಗಾರಿಬ್ಬರು ಪರಸ್ಪರ ಜಗಳಕ್ಕಿಳಿದ ಅಹಿತಕರ ಘಟನೆ ನಡೆದಿದೆ. ನಾಗ್ಪುರದ ವಿಸಿಎ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಹಾಲಿ ರಣಜಿ ಚಾಂಪಿಯನ್ ವಿದರ್ಭ ಹಾಗೂ ಶೇಷ ಭಾರತ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಶೇಷ ಭಾರತ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಯಶ್ ಧುಲ್ ಭರ್ಜರಿ ಹೊಡೆತಕ್ಕೆ ಮುಂದಾಗಿ ಯಶ್ ಠಾಕೂರ್ಗೆ ವಿಕೆಟ್ ಒಪ್ಪಿಸಿದ್ದರು. ಅತ್ತ ಶತಕದಂಚಿನಲ್ಲಿ ಯಶ್ ಧುಲ್ (92) ವಿಕೆಟ್ ಪಡೆದು ಠಾಕೂರ್ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದಾರೆ.
ಇದರಿಂದ ಕುಪಿತಗೊಂಡ ಯಶ್ ಧುಲ್, ಯಶ್ ಠಾಕೂರ್ ಜೊತೆಗೆ ಮಾತಿನ ಚಕಮಕಿಗೆ ಇಳಿದಿದ್ದು, ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಇತ್ತ ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಆಗಮಿಸಿದ ಸಹ ಆಟಗಾರರು ಇಬ್ಬರನ್ನು ಸಮಾಧಾನಗೊಳಿಸಲು ಮುಂದಾದರು. ಅಲ್ಲದೆ ಅಂಪೈರ್ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಇದೀಗ ಭಾರತೀಯ ಆಟಗಾರರಿಬ್ಬರ ಜಗಳದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ವಿದರ್ಭ ತಂಡವು 342 ರನ್ ಕಲೆಹಾಕಿದರೆ, ಶೇಷ ಭಾರತ ತಂಡವು 214 ರನ್ಗಳಿಗೆ ಆಲೌಟ್ ಆಯಿತು. ದ್ವಿತೀಯ ಇನಿಂಗ್ಸ್ನಲ್ಲಿ ವಿಧರ್ಭ 232 ರನ್ ಕಲೆಹಾಕಿತು. ಅದರಂತೆ ಕೊನೆಯ ಇನಿಂಗ್ಸ್ನಲ್ಲಿ 361 ರನ್ಗಳ ಗುರಿ ಪಡೆದ ಶೇಷ ಭಾರತ ತಂಡವು 267 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ವಿದರ್ಭ ತಂಡವು 93 ರನ್ಗಳ ಭರ್ಜರಿ ಜಯ ಸಾಧಿಸಿದೆ.
ವಿದರ್ಭ ಪ್ಲೇಯಿಂಗ್ ಇಲೆವೆನ್: ಧ್ರುವ ಶೋರೆ , ಅಥರ್ವ ತೈಡೆ , ಅಮನ್ ಮೊಖಡೆ , ದಾನಿಶ್ ಮಾಲೆವಾರ್ , ಯಶ್ ರಾಥೋಡ್ , ಅಕ್ಷಯ್ ವಾಡ್ಕರ್ (ನಾಯಕ) , ಪಾರ್ಥ್ ರೇಖಾಡೆ , ಹರ್ಷ ದುಬೆ , ಯಶ್ ಠಾಕೂರ್ , ದರ್ಶನ್ ನಲ್ಕಂಡೆ , ಆದಿತ್ಯ ಠಾಕರೆ.
ಶೇಷ ಭಾರತ ಪ್ಲೇಯಿಂಗ್ ಇಲೆವೆನ್: ಅಭಿಮನ್ಯು ಈಶ್ವರನ್ , ರುತುರಾಜ್ ಗಾಯಕ್ವಾಡ್ , ಆರ್ಯನ್ ಜುಯಲ್ , ರಜತ್ ಪಾಟಿದಾರ್ (ನಾಯಕ) , ಯಶ್ ಧುಲ್ , ಇಶನ್ ಕಿಶನ್ ( ವಿಕೆಟ್ ಕೀಪರ್ ) , ಮಾನವ್ ಸುತಾರ್ , ಸರನ್ಶ್ ಜೈನ್ , ಅನ್ಶುಲ್ ಕಂಬೋಜ್ , ಆಕಾಶ್ ದೀಪ್ , ಗುರ್ನೂರ್ ಬ್ರಾರ್.

