ಬಾಂಗ್ಲಾದೇಶ್ ವಿರುದ್ಧ ಹೀನಾಯವಾಗಿ ಸೋತ ವೆಸ್ಟ್ ಇಂಡೀಸ್
Bangladesh vs West Indies, 1st ODI: ವಿಂಡೀಸ್ ಬ್ಯಾಟರ್ಗಳು ಬ್ಯಾಕ್ ಟು ಬ್ಯಾಕ್ ವಿಕೆಟ್ ಕೈಚೆಲ್ಲುವ ಮೂಲಕ ಪೆವಿಲಿಯನ್ ಪರೇಡ್ ನಡೆಸಿದರು. ಪರಿಣಾಮ 51 ರನ್ಗೆ ಒಂದು ವಿಕೆಟ್ ಕಳೆದುಕೊಂಡಿದ್ದ ವೆಸ್ಟ್ ಇಂಡೀಸ್ 39 ಓವರ್ಗಳಲ್ಲಿ ಕೇವಲ 133 ರನ್ಗಳಿಸಿ ಆಲೌಟ್ ಆಯಿತು. ಈ ಮೂಲಕ ಬಾಂಗ್ಲಾದೇಶ್ ತಂಡವು 74 ರನ್ಗಳ ಜಯ ಸಾಧಿಸಿದೆ.
ಢಾಕಾದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ಶೈ ಹೋಪ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ಪರ ತೌಹಿದ್ ಹೃದೋಯ್ 51 ರನ್ ಬಾರಿಸಿದರು. ಇನ್ನು ಮಹಿದುಲ್ ಇಸ್ಲಾಂ 46 ರನ್ಗಳ ಕೊಡುಗೆ ನೀಡಿದರು. ಇದಾಗ್ಯೂ ಬಾಂಗ್ಲಾದೇಶ್ ತಂಡ 49.4 ಓವರ್ಗಳಲ್ಲಿ 207 ರನ್ಗಳಿಸಿ ಆಲೌಟ್ ಆಯಿತು.
208 ರನ್ಗಳ ಸುಲಭ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡಕ್ಕೆ ಬ್ರಾಂಡನ್ ಕಿಂಗ್ (44) ಹಾಗೂ ಅಲಿಕ್ ಅಥನಾಝ್ (27) ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 51 ರನ್ಗಳಿಸಿ ಈ ಜೋಡಿಯನ್ನು ಪೆವಿಲಿಯನ್ಗೆ ಕಳುಹಿಸುವಲ್ಲಿ ರಿಶಾದ್ ಹೊಸೈನ್ ಯಶಸ್ವಿಯಾದರು.
ಆ ಬಳಿಕ ಬಂದ ವಿಂಡೀಸ್ ಬ್ಯಾಟರ್ಗಳು ಬ್ಯಾಕ್ ಟು ಬ್ಯಾಕ್ ವಿಕೆಟ್ ಕೈಚೆಲ್ಲುವ ಮೂಲಕ ಪೆವಿಲಿಯನ್ ಪರೇಡ್ ನಡೆಸಿದರು. ಪರಿಣಾಮ 51 ರನ್ಗೆ ಒಂದು ವಿಕೆಟ್ ಕಳೆದುಕೊಂಡಿದ್ದ ವೆಸ್ಟ್ ಇಂಡೀಸ್ 39 ಓವರ್ಗಳಲ್ಲಿ ಕೇವಲ 133 ರನ್ಗಳಿಸಿ ಆಲೌಟ್ ಆಯಿತು. ಈ ಮೂಲಕ ಬಾಂಗ್ಲಾದೇಶ್ ತಂಡವು 74 ರನ್ಗಳ ಜಯ ಸಾಧಿಸಿದೆ. ಇನ್ನು ಬಾಂಗ್ಲಾದೇಶ್ ಪರ ಸ್ಪಿನ್ ಮೋಡಿ ಮಾಡಿದ ರಿಶಾದ್ ಹೊಸೈನ್ 9 ಓವರ್ಗಳಲ್ಲಿ ಕೇವಲ 35 ರನ್ ನೀಡಿ 6 ವಿಕೆಟ್ ಕಬಳಿಸಿ ಮಿಂಚಿದರು.

