ದೆಹಲಿ: ಸಿದ್ದರಾಮಯ್ಯ ಮತ್ತು ಪರಮೇಶ್ವರ ನಡುವಿನ ಮಾತು ಕೇಳಿ ಅಲ್ಲಿ ನೆರೆದಿದ್ದವರೆಲ್ಲ ಜೋರಾಗಿ ನಕ್ಕರು!
ಪರಮೇಶ್ವರ ಅವರು ಸಿದ್ದರಾಮಯ್ಯನವರನ್ನು ಉದ್ದೇಶಿಸಿ ‘ಅಧ್ಯಕ್ಷರೇ ನಮಸ್ಕಾರ’ ಅಂತ ಹೇಳಿ ಅವರನ್ನು ದಾಟಿ ಮುಂದೆ ಹೋಗುವಾಗ ‘ನಿಮ್ಮನ್ನು ಓವರ್ ಟೇಕ್ ಮಾಡಬೇಕಲ್ಲ, ಮಾಡಬಹುದಾ?’ ಅಂತ ಹೇಳಿದಾಗ ಅಲ್ಲಿದ್ದವರೆಲ್ಲ ಗೊಳ್ಳೆಂದು ನಗುತ್ತಾರೆ.
New Delhi: ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ (KPCC) ಸದಸ್ಯರೆಲ್ಲರೂ ದೆಹಲಿಯಲ್ಲಿದ್ದಾರೆ. ಬುಧವಾರ ಸತತವಾಗಿ 6ನೇ ದಿನ ಜಾರಿ ನಿರ್ದೇಶಾನಲಯದ (ED) ಎದುರು ವಿಚಾರಣೆಗೆ ಹಾಜರಾಗಿರುವ ರಾಹುಲ್ ಗಾಂಧಿಯವರಿಗೆ ನೈತಿಕ ಬೆಂಬಲ ಸೂಚಿಸಲು ಬೇರೆ ಬೇರೆ ಪ್ರದೇಶಗಳ ಕಾಂಗ್ರೆಸ್ ನಾಯಕರು ಸಹ ದೆಹಲಿಯಲ್ಲ್ಲಿ ಘೇರಾಯಿಸಿದ್ದಾರೆ. ಕರ್ನಾಟಕದ ಮುಖಂಡರು ಸಿದ್ದರಾಮಯ್ಯನವರ (Siddaramaiah) ನೇತೃತ್ವದದಲ್ಲಿ ಒಂದೆಡೆ ಸೇರಿ ಸಭೆ ನಡೆಸುತ್ತಿದ್ದಾರೆ.
ಆ ಸಮಯಕ್ಕೆ ಅಲ್ಲಿಗೆ ಆಗಮಿಸುವ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ಜಿ ಪರಮೇಶ್ವರ (G Parameswara) ಅವರು ಸಿದ್ದರಾಮಯ್ಯನವರನ್ನು ಉದ್ದೇಶಿಸಿ ‘ಅಧ್ಯಕ್ಷರೇ ನಮಸ್ಕಾರ’ ಅಂತ ಹೇಳಿ ಅವರನ್ನು ದಾಟಿ ಮುಂದೆ ಹೋಗುವಾಗ ‘ನಿಮ್ಮನ್ನು ಓವರ್ ಟೇಕ್ ಮಾಡಬೇಕಲ್ಲ, ಮಾಡಬಹುದಾ?’ ಅಂತ ಹೇಳಿದಾಗ ಅಲ್ಲಿದ್ದವರೆಲ್ಲ ಗೊಳ್ಳೆಂದು ನಗುತ್ತಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.