ಹೆಬ್ಬಾವಿನ ಮರಿಯೆಂದು ವಿಷಕಾರಿ ಕೊಳಕು ಮಂಡಲ ಕೈಯಲ್ಲಿ ಹಿಡಿದ ವ್ಯಕ್ತಿ! ಆಮೇಲೇನಾಯ್ತು? ವಿಡಿಯೋ ನೋಡಿ

| Updated By: ವಿವೇಕ ಬಿರಾದಾರ

Updated on: Sep 14, 2024 | 12:51 PM

ಬಂಟ್ವಾಳದ ರಾಮಚಂದ್ರ ಪೂಜಾರಿ ಎಂಬುವರು ಮಂಗಳೂರು ಹೊರವಲಯದ ಬಜಪೆಯ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವಿನ ಮರಿಯೊಂದನ್ನು ಕಂಡಿದ್ದಾರೆ. ಹೆಬ್ಬಾವಿನ ಮರಿ ಎಂದು ತಿಳಿದ ರಾಮಚಂದ್ರ ಪೂಜಾರಿ ಹಾವನ್ನು ಹಿಡಿದಿದ್ದಾರೆ. ಮುಂದೇನಾಯ್ತು ಈ ಸ್ಟೋರಿ ಓದಿ.

ಮಂಗಳೂರು ಸೆಪ್ಟೆಂಬರ್​​ 14: ಹೆಬ್ಬಾವಿನ ಮರಿಯೆಂದು ವಿಷದ ತಿಳಿದು ಕೊಳಕು ಮಂಡಲ (Kolaku Mandala) ಹಾವಿನ ಮರಿ ಹಿಡಿಯಲು ಯತ್ನಿಸಿ ಕಚ್ಚಿಸಿಕೊಂಡು ವ್ಯಕ್ತಿ ಮೃತಪಟ್ಟಿರುವ ಘಟನೆ ಮಂಗಳೂರು (Mangaluru) ಹೊರವಲಯದ ಬಜಪೆಯಲ್ಲಿ ನಡೆದಿದೆ. ಬಂಟ್ವಾಳದ ರಾಮಚಂದ್ರ ಪೂಜಾರಿ (58) ಮೃತ ದುರ್ದೈವಿ.

ಬಂಟ್ವಾಳದ ರಾಮಚಂದ್ರ ಪೂಜಾರಿ ಮರವೂರಿನ ಮನೆಯೊಂದರಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದರು.
ಸೆಪ್ಟೆಂಬರ್​ 4 ರಂದು ಮಧ್ಯಾಹ್ನ ಮನೆಯ ಮೆಟ್ಟಿಲು ಸಮೀಪ ಹಾವಿನ ಮರಿ ಕಾಣಿಸಿಕೊಂಡಿದೆ. ಹೆಬ್ಬಾವಿನ ಮರಿ ಎಂದು ಭಾವಿಸಿ ಕೊಳಕು ಮಂಡಲ ಮರಿಯನ್ನು ರಾಮಚಂದ್ರ ಪೂಜಾರಿ ಬರಿಗೈಯಲ್ಲಿ ಹಿಡಿದಿದ್ದಾರೆ.

ಈ ವೇಳೆ ರಾಮಚಂದ್ರ ಅವರ ಕೈಗೆ ಕೊಳಕು ಮಂಡಲ ಹಾವಿನ ಮರಿ ಕಡಿದಿದೆ. ಕಚ್ಚಿದ್ದು ಹೆಬ್ಬಾವಿನ ಮರಿ ಎಂದು ರಾಮಚಂದ್ರ ನಿರ್ಲಕ್ಷ್ಯ ಮಾಡಿದ್ದರು. ಆದರೆ, ಸ್ವಲ್ಪ ಹೊತ್ತಿನ ಬಳಿಕ ರಾಮಚಂದ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ರಾಮಚಂದ್ರ ಮೃತಪಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published on: Sep 14, 2024 12:42 PM