ನನ್ನನ್ನು 3 ತಿಂಗಳು ಮನೆಯಲ್ಲಿ ಮಲಗಿಸಿದ್ರಿ, ಇನ್ಮುಂದೆ ನಾನು ಮಲಗಲ್ಲ ಎಂದ ಹೆಚ್ಡಿ ದೇವೇಗೌಡ
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಇವತ್ತು ಹೇಳುತ್ತೇನೆ ಇಲ್ಲಿಂದ ಮುಂದಕ್ಕೆ ನನ್ನ ಹೋರಾಟ ಮತ್ತೆ ಪ್ರಾರಂಭ ಆಗುತ್ತೆ. ದೇವೇಗೌಡ್ರು ಮನೆಯಲ್ಲಿ ಮಲಗೋದಿಲ್ಲ. ನನ್ನ ಮೂರು ತಿಂಗಳು ಮನೆಯಲ್ಲಿ ಮಲಗಿಸಿ ಬಿಟ್ರಿ ನೀವು ಎಂದು ಗುಡುಗಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 14: ಮನೆಯಿಂದ ಹೊರ ಬರುವ ಪರಿಸ್ಥಿತಿಯೇ ಇರಲಿಲ್ಲ. ಇವತ್ತು ಹೇಳ್ತೀನಿ ಇಲ್ಲಿಂದ ಮುಂದಕ್ಕೆ ನನ್ನ ಹೋರಾಟ ಮತ್ತೆ ಆರಂಭವಾಗುತ್ತೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ (HD DeveGowda) ಗುಡುಗಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನನ್ನು 3 ತಿಂಗಳು ಮನೆಯಲ್ಲಿ ಮಲಗಿಸಿದ್ರಿ, ಇನ್ಮುಂದೆ ನಾನು ಮಲಗುವುದಿಲ್ಲ. ಏನಪ್ಪಾ ಮೂರು ತಿಂಗಳು ನಮ್ಮ ಮನೆ ಹತ್ತಿರ ತೊಂದರೆ ತೆಗೆದುಕೊಂಡು ಬಿಟ್ರಿ. ಈ ದೇಶದಲ್ಲಿ ನಾನು ಅಷ್ಟೊಂದು ತಲೆಮರೆಸಿಕೊಳ್ಳುವ ರಾಜಕಾರಣಿ ಆಗಿದ್ನಾ? 62 ವರ್ಷ ಶಾಸಕನಾಗಿ, ವಿರೋಧಪಕ್ಷದ ನಾಯಕನಾಗಿ, ಮಂತ್ರಿಯಾಗಿ, ಸಿಎಂ ಆಗಿ, ಪ್ರಧಾನಿಯಾಗಿ ಕೆಲಸ ಮಾಡಿದ್ದೇನೆ. ಅಷ್ಟೊಂದು ಅದೂ ನನ್ನ ಮಗಳ ಮನೆ ಹತ್ತಿರ ಮಲಗಿ ಬಿಟ್ಟರಲ್ಲಾ ನೀವು. ತುಂಬಾತೊಂದರೆ ತೆಗೆದುಕೊಂಡ್ರಿ, ನನ್ನ ಮುಖದಲ್ಲಿ ಬದಲಾವಣೆ ಆಗಿದೆಯಾ ಎಂದು ಪ್ರಶ್ನಿಸಿದ್ದಾರೆ. ಯಾವ ದೇವೇಗೌಡ ಹೋರಾಟ ಮಾಡಿದ್ನೋ? ಮೋದಿಯವರ ಜೊತೆ ಕೂತು ಚಿಕ್ಕಬಳ್ಳಾಪುರ ಮತ್ತು ಮೈಸೂರಿನಲ್ಲಿ ಅದೇ ದೇವೇಗೌಡ ಮತ್ತೆ ನಿಂತಿದ್ದೇನೆ. ಯಾರು ಮಾಡಿದ್ದಾರೆ ಗೊತ್ತು ನನಗೆ ಏನ್ ಮಾಡಿದ್ದಾರೆ ಗೊತ್ತು ನನಗೆ. ಈ ರಾಜ್ಯ ಹೇಗೆ ನಡೆಸುತ್ತಿದ್ದಾರೆ ಗೊತ್ತಿದೆ ನನಗೆ. ಕಾಲ ಬರುತ್ತೆ ಹೋರಾಟಕ್ಕೆ ನಿಲ್ಲುತ್ತೇನೆ. ಮನೆಯಲ್ಲಿ ಮಲಗೋದಿಲ್ಲ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.