ಬಂದ್ ಗತಿ ಕಾಣಿಸುತ್ತೇವೆ: ಗೃಹ ಸಚಿವ ಡಾ ಜಿ ಪರಮೇಶ್ವರ್ ಹೀಗೆ ಹೇಳಿದ್ದೇಕೆ?
ಗೃಹಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಇಂದು ವಿಧಾನಸೌಧದಲ್ಲಿ ಸಂಪುಟ ಉಪಸಮಿತಿ ಸಭೆ ಮಾಡಲಾಗಿದೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಯಾವುದನ್ನೂ ನಾವು ಸುಮ್ಮನೆ ಬಿಡಲ್ಲ. ಬಂದು ಗತಿ ಕಾಣಿಸುತ್ತೇವೆ ಎಂದು ಹೇಳಿದ್ದಾರೆ. ವಿಪಕ್ಷ ನಾಯಕರ ವಿರುದ್ಧ ನಾವು ದ್ವೇಷದ ರಾಜಕಾರಣ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 13: ಸಚಿವ ಸಂಪುಟ ಉಪಸಮಿತಿ ಸಭೆ ನಂತರ ವಿಧಾನಸೌಧದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwara) ಪ್ರತಿಕ್ರಿಯಿಸಿದ್ದು, ಮುಡಾ ಪ್ರಕರಣದ ಮುಂಚೆಯೇ ಹಳೇ ಕೇಸ್‌ಗಳ ತನಿಖೆ ನಡೆಯುತ್ತಿದೆ. ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ. ಯಾವುದನ್ನೂ ನಾವು ಸುಮ್ಮನೆ ಬಿಡಲ್ಲ. ಬಂದು ಗತಿ ಕಾಣಿಸುತ್ತೇವೆ ಎಂದು ಹೇಳಿದ್ದಾರೆ. ವಿಪಕ್ಷ ನಾಯಕರ ವಿರುದ್ಧ ನಾವು ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಗುಪ್ತಚರಕ್ಕೆ ನಿಂಬಾಳ್ಕರ್ ವರ್ಗಾವಣೆ ವಿಚಾರವಾಗಿ ಮಾತನಾಡಿದ್ದು, ಅದು ಮುಖ್ಯಮಂತ್ರಿಗಳ ತೀರ್ಮಾನ. ಯಾರ ಮೇಲೆ ಆತ್ಮವಿಶ್ವಾಸ ಇದೆ ಅವನ್ನು ಮಾಡಿರುತ್ತಾರೆ. ಮುಖ್ಯಮಂತ್ರಿಗಳ ಬಳಿಯೇ ಗುಪ್ತಚರ ಇದೆ. ನನ್ನ ಬಳಿಯೂ ಚರ್ಚೆ ಮಾಡಿದ್ದರು ಎಂದಿದ್ದಾರೆ.
ವರದಿ: ಈರಣ್ಣ ಬಸವರಾಜು
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos