ಮಹಿಳಾ ಅಧಿಕಾರಿಯ ಕೂದಲು ಹಿಡಿದು ಎಳೆದಾಡಿದ ಹೆಂಗಸು; ವಿಡಿಯೋ ವೈರಲ್
ರಾಜಸ್ಥಾನದಲ್ಲಿ ಮಹಿಳಾ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅವರನ್ನು ಮಹಿಳೆಯೊಬ್ಬರು ಕೂದಲು ಹಿಡಿದು ಎಳೆದಾಡಿದ ವಿಡಿಯೋ ವೈರಲ್ ಆಗಿದೆ. ಎಸ್‌ಡಿಎಂ ಸುನೀತಾ ಮೀನಾ ಅವರು ಬುಲ್ಡೋಜರ್ ಜೊತೆಗೆ ಗಂಗಾಪುರ ನಗರ ಜಿಲ್ಲೆಗೆ ಆಗಮಿಸಿದ್ದರು. ಪೊಲೀಸರು ಮತ್ತು ಆಡಳಿತ ತಂಡದ ಮುಂದೆಯೇ ಈ ವೇಳೆ ಅವರ ಜೊತೆ ಮಹಿಳೆ ಘರ್ಷಣೆ ನಡೆಸಿದ್ದಾರೆ. ಬುಲ್ಡೋಜರ್ ಕ್ರಮದಿಂದ ಕೋಪಗೊಂಡ ಮಹಿಳೆ, ಮಹಿಳಾ ಅಧಿಕಾರಿಯ ಕೂದಲು ಹಿಡಿದು ಎಳೆದಿದ್ದಾರೆ.
ಜೈಪುರ: ರಾಜಸ್ಥಾನದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಮಹಿಳಾ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಅತಿಕ್ರಮಣಗಳನ್ನು ತಡೆಯಲು ಹೋದಾಗ ಮಹಿಳೆಯೊಬ್ಬರು ಆಕೆಯ ಕೂದಲನ್ನು ಹಿಡಿದು ಎಳೆದಾಡಿದ ಘಟನೆ ನಡೆದಿದೆ. ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಗಂಗಾಪುರ ನಗರದ ತೋಡಭೀಮ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos