ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ

|

Updated on: Oct 03, 2024 | 7:17 PM

ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ತಹಸೀಲ್ದಾರ್ ನಿವೃತ್ತರಾದ ಹಿನ್ನೆಲೆಯಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬಾರ್ ಡ್ಯಾನ್ಸರ್​ಗಳನ್ನು ಕರೆಸಿ ಕುಣಿಯುವಂತೆ ಮಾಡಲಾಗಿತ್ತು. ಇದೇ ವೇಳೆ ಕಂದಾಯ ನೌಕರರು ಕೂಡ ಕುಣಿದು ಕುಪ್ಪಳಿಸಿದರು. ಪೋಲೀಸರ ವಾಂಟೆಡ್ ಕ್ರಿಮಿನಲ್ ಕೂಡ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುತ್ತಿರುವುದು ಕಂಡುಬಂದಿದೆ.

ನವದೆಹಲಿ: ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಲಾಲ್‌ಗಂಜ್ ತಹಸೀಲ್ದಾರ್ ನಿವೃತ್ತರಾದ ಹಿನ್ನೆಲೆಯಲ್ಲಿ ಗಾಂಧಿ ಜಯಂತಿಯ ಮುನ್ನಾದಿನದಂದು ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಸಮಾರಂಭವನ್ನು ಅವಿಸ್ಮರಣೀಯವಾಗಿಸಲು ಕಂದಾಯ ಸಿಬ್ಬಂದಿ ವರ್ಣರಂಜಿತ ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಬಾರ್ ಡ್ಯಾನ್ಸರ್ ಗಳನ್ನು ಕರೆಸಿ ಅರೆನಗ್ನ ಬಟ್ಟೆಯಲ್ಲಿ ಕುಣಿಯುವಂತೆ ಮಾಡಲಾಗಿತ್ತು. ಮಹಿಳಾ ನರ್ತಕಿಯರು ಸೊಂಟ ಕುಲುಕಲು ಆರಂಭಿಸಿದಾಗ ಕುಡಿದ ಮತ್ತಿನಲ್ಲಿದ್ದ ಕೆಲ ಕಂದಾಯ ಇಲಾಖೆಯ ಸಿಬ್ಬಂದಿ ತಡೆಯಲಾರದೆ ನರ್ತಕಿಯರ ಸೊಂಟದ ಮೇಲೆ ಕೈಯಿಟ್ಟು ಕುಣಿದಾಡಿದರು. ಈ ವಿಡಿಯೋಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on