ಅಜಿತ್​​​ ಪವಾರ್​​​ ಸಾವು ಪ್ರಕರಣದ ಹೊಸ ಅಪ್ಡೇಟ್​​​: ವಿಮಾನ ಪತನದ ಕೊನೆಯ ವಿಡಿಯೋ ವೈರಲ್

Updated on: Feb 11, 2026 | 3:34 PM

ಜನವರಿ 28, 2026 ರ ಬಾರಾಮತಿ ವಿಮಾನ ದುರಂತದ ವೈರಲ್ ವಿಡಿಯೋ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ, ಡಿಸಿಎಂ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಈ ಘಟನೆಯಲ್ಲಿ ವಿಮಾನವು ಮಂಜಿನ ನಡುವೆ ನಿಯಂತ್ರಣ ಕಳೆದುಕೊಂಡು ಅಪ್ಪಳಿಸಿದೆ. ವಿಡಿಯೋದಲ್ಲಿ ದಟ್ಟವಾದ ಮಂಜು ಸ್ಪಷ್ಟವಾಗಿದ್ದು, ಪೈಲಟ್‌ಗೆ ರನ್‌ವೇ ಗುರುತಿಸಲು ಅಡಚಣೆಯಾಗಿದೆ ಎಂಬ ಶಂಕೆ ಬಲವಾಗಿದೆ. ILS ಕೊರತೆ ಮತ್ತು ಪ್ರತಿಕೂಲ ಹವಾಮಾನದಲ್ಲಿ ಹಾರಾಟಕ್ಕೆ ಅನುಮತಿ ನೀಡಿದ್ದು ತನಿಖೆಯ ಮುಖ್ಯ ಅಂಶಗಳಾಗಿವೆ.

ಮಹಾರಾಷ್ಟ್ರ, ಫೆ.11: ಬಾರಾಮತಿಯಲ್ಲಿ ಜನವರಿ 28, 2026 ರಂದು ಸಂಭವಿಸಿದ ಭೀಕರ ವಿಮಾನ ಪತನದಿಂದ ಡಿಸಿಎಂ ಅಜಿತ್​​​ ಪವಾರ್​​​ ಸಾವನ್ನಪ್ಪಿದ್ದರು. ಇದೀಗ ವಿಮಾನ ಪತನದ ಪ್ರಮುಖ ವಿಡಿಯೋ ವೈರಲ್​​ ಆಗಿದೆ. ಇದು ಇಡೀ ದೇಶವನ್ನೇ ಬೆಚ್ಚಿಬೀಳಿಸಿವೆ. ವಿಮಾನ ನಿಲ್ದಾಣದ ಸಮೀಪವಿರುವ ಸಿಸಿ ಟಿವಿ ಕ್ಯಾಮರಾದಲ್ಲಿ ಬೆಳಿಗ್ಗೆ 8:46 ರ ಸುಮಾರಿಗೆ ಈ ದೃಶ್ಯ ಸೆರೆಯಾಗಿದೆ. ವಿಮಾನವು ರನ್‌ವೇ ಹತ್ತಿರ ಬರುತ್ತಿದ್ದಂತೆ ಹತೋಟಿ ಕಳೆದುಕೊಂಡು ನೆಲಕ್ಕೆ ಅಪ್ಪಳಿಸಿ, ಕ್ಷಣಾರ್ಧದಲ್ಲಿ ಬೆಂಕಿಯ ಉಂಡೆಯಾಗಿ (Fireball) ಮಾರ್ಪಡುವುದನ್ನು ವಿಡಿಯೋ ತೋರಿಸುತ್ತದೆ. ವಿಡಿಯೋದಲ್ಲಿ ದಟ್ಟವಾದ ಮಂಜು ಕವಿದಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇದು ಪೈಲಟ್‌ಗೆ ರನ್‌ವೇ ಗುರುತಿಸಲು ತೊಂದರೆಯಾಗಿರಬಹುದು ಎಂಬ ಶಂಕೆಯನ್ನು ಬಲಪಡಿಸಿದೆ.ವಿಮಾನದ ‘ಬ್ಲ್ಯಾಕ್ ಬಾಕ್ಸ್’ ಅನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದ್ದು, ಅದರ ದತ್ತಾಂಶವನ್ನು ವಿಶ್ಲೇಷಿಸಲಾಗುತ್ತಿದೆ. ಇದು ಅಪಘಾತದ ನಿಖರ ಕಾರಣವನ್ನು ತಿಳಿಸಲಿದೆ. ಬಾರಾಮತಿ ವಿಮಾನ ನಿಲ್ದಾಣದಲ್ಲಿ ಸುಧಾರಿತ ಲ್ಯಾಂಡಿಂಗ್ ವ್ಯವಸ್ಥೆಗಳ (ILS) ಕೊರತೆ ಇರುವುದು ಮತ್ತು ಪ್ರತಿಕೂಲ ಹವಾಮಾನದ ನಡುವೆಯೂ ವಿಮಾನ ಹಾರಾಟಕ್ಕೆ ಅನುಮತಿ ನೀಡಿದ್ದು ತನಿಖೆಯ ಪ್ರಮುಖ ಭಾಗವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More