ಚಾಮುಂಡಿ ಸನ್ನಿಧಿಯಲ್ಲಿ ಫೈಲ್ ನೀಡಿ ಪೂಜೆ ಮಾಡಿಸಿದ ಯತ್ನಾಳ್, ಆ ಫೈಲ್ ಯಾವ್ದು!?
ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅವರು ಅರ್ಚಕರಿಗೆ ಒಂದು ರಹಸ್ಯ ಫೈಲ್ ನೀಡಿ ಪೂಜೆ ಮಾಡಿಸಿದ್ದು, ಆ ಫೈಲ್ ಏನು ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ. ಈ ಘಟನೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಮೈಸೂರು, ಫೆಬ್ರವರಿ 21: ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಶುಕ್ರವಾರ (ಫೆಬ್ರವರಿ, 21) ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ಈ ವೇಳೆ ಶಾಸಕ ಯತ್ನಾಳ್ ಅರ್ಚಕರಿಗೆ ಫೈಲ್ವೊಂದನ್ನು ನೀಡಿ ಪೂಜೆ ಮಾಡಿಸಿದರು. ಇದೀಗ, ಆ ಫೈಲ್ ಯಾವುದು? ಎಂದು ಕುತೂಹಲಕ್ಕೆ ಕಾರಣವಾಗಿದೆ.
Published on: Feb 21, 2025 11:44 AM