ಕೆಪಿಸಿಸಿ ಕಚೇರಿಯಲ್ಲಿ ಜೈಕಾರ ಮಾಡಿದ ಕಾರ್ಯಕರ್ತರನ್ನು ಹೊರಹಾಕಿಸುವ ಎಚ್ಚರಿಕೆ ನೀಡಿದ ಡಿಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷನ ಬದಲಾವಣೆಯಾಗಬೇಕೆಂದು ಕೆಲವು ಕಾಂಗ್ರೆಸ್ ನಾಯಕರು ಬಹಿರಂಗವಾಗೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಹಕಾರ ಸಚಿವ ಕೆಎನ್ ರಾಜಣ್ಣ ನೇರವಾಗಿ ಶಿವಕುಮಾರ್ ಜೊತೆ ಪೈಪೋಟಿಗೆ ಬಿದ್ದಿದ್ದಾರೆ ಮತ್ತು ಪಕ್ಷದ ಅಧ್ಯಕ್ಷನ ಸ್ಥಾನಕ್ಕಾಗಿ ಮಂತ್ರಿ ಪದವಿ ಬಿಡಲು ತಯಾರಿರುವುದಾಗಿ ಹೇಳಿದ್ದಾರೆ. ನಿನ್ನೆ ದೆಹಲಿಗೆ ಹೋಗಿದ್ದ ಅವರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತೊಮ್ಮೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ.
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಯುವಾಗ ಗಲಾಟೆ ಮಾಡಿದರೆ, ಅಶಿಸ್ತು ಪ್ರದರ್ಶಿಸಿದರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಕೋಪ ಬಂದು ಬಿಡುತ್ತದೆ. ಯೂಥ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದವರ ಹೆಸರುಗಳನ್ನು ಅವರು ಘೋಷಣೆ ಮಾಡುವಾಗ ಒಬ್ಬರ ಹೆಸರು ನೆರೆದಿದ್ದ ಕೆಲವು ಕಾರ್ಯಕರ್ತರಲ್ಲಿ ರೋಮಾಂಚನ ಹುಟ್ಟಿಸುತ್ತದೆ. ಅವರೆಲ್ಲ ಒಕ್ಕೊರಲಿನಿಂದ ಜಯವಾಗಲಿ ಎಂದು ಘೋಷಣೆ ಹಾಕುತ್ತಾರೆ. ಕೂಡಲೇ ಸಿಟ್ಟಿಗೇಳುವ ಶಿವಕುಮಾರ್ ಶಿಸ್ತು ಕಾಯ್ದುಕೊಳ್ಳದಿದ್ದರೆ ಕಚೇರಿಯಿಂದ ಹೊರ ಹಾಕಿಸ್ತೀನಿ ಅಂದಾಗ ಕಾರ್ಯಕರ್ತರು ಕೇವಲ ಚಪ್ಪಾಳೆಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಾಜಣ್ಣ ಆಡಿರುವ ಮಾತಿಗೆ ಪ್ರತಿಕ್ರಿಯೆ ಕೇಳಿದಾಗ ಡಿಕೆ ಶಿವಕುಮಾರ್, ಕೇರಳ ಹೋಗ್ತಿದ್ದೀನಿ, ಆಮೇಲೆ ಮಾತಾಡ್ತೀನಿ ಎಂದರು!