Karnataka Assembly Polls: ಸೋನಿಯಾ ಗಾಂಧಿಯನ್ನು ಅವಮಾನಿಸಿರುವ ಬಸನಗೌಡ ಯತ್ನಾಳ್ರನ್ನು ಬಿಜೆಪಿಯಿಂದ ಉಚ್ಚಾಟಿಸಬೇಕು: ಡಿಕೆ ಶಿವಕುಮಾರ್
ರಾಷ್ಟ್ರಕ್ಕಾಗಿ ಜೀವವನ್ನೇ ಬಲಿದಾನ ಮಾಡಿದ ನಾಯಕನ ಪತ್ನಿಯ ಬಗ್ಗೆ ಇಷ್ಟು ಅವಹೇಳನಕಾರಿಯಾಗಿ ಮಾತಾಡಿದ ಯತ್ನಾಳ್ ರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ ಅವರು ಪ್ರದಾನ ಮಂತ್ರಿ ನರೇಂದ್ರ ಮೋದಿಯವರನ್ನು (PM Narendra Modi) ನಾಗರಹಾವಿಗೆ ಹೋಲಿಸಿ ಕ್ಷಮೆಯಾಚಿಸಿದರು. ಇಂದು ಕೊಪ್ಪಳದಲ್ಲಿ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal), ಸೋನಿಯಾ ಗಾಂಧಿಯನ್ನು ವಿಷಕನ್ಯೆ ಎಂದು ಕರೆದರು. ಅವರ ಪದಪ್ರಯೋಗದಿಂದ ರೊಚ್ಚಿಗೆದ್ದಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ವಿಜಯಪುರದ ಶಾಸಕನನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಆ ದುಷ್ಟನ ಕ್ಷಮಾಪಣೆ ನನಗೆ ಬೇಕಿಲ್ಲ, ಅವರ ಪಕ್ಷದ ಹಿರಿಯ ನಾಯಕರು ಕ್ಷಮಾಪಣೆ ಕೇಳಬೇಕು. ಪ್ರಧಾನ ಮಂತ್ರಿ ಹುದ್ದೆಯನ್ನು ತ್ಯಾಗ ಮಾಡಿದ ಮತ್ತು ರಾಷ್ಟ್ರಕ್ಕಾಗಿ ಜೀವವನ್ನೇ ಬಲಿದಾನ ಮಾಡಿದ ನಾಯಕನ ಪತ್ನಿಯ ಬಗ್ಗೆ ಇಷ್ಟು ಅವಹೇಳನಕಾರಿಯಾಗಿ ಮಾತಾಡಿದ ಯತ್ನಾಳ್ ರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ