Panchamasali Protest: ತೆಪ್ಪಗಾಗಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಳೇ ವರಾತಕ್ಕೆ ವಾಪಸ್ಸಾಗಿದ್ದಾರೆ!

|

Updated on: Feb 03, 2023 | 4:59 PM

ದೇಶದ ಪ್ರಧಾನ ಮಂತ್ರಿಗೆ ರಾಜ್ಯವೊಂದರ ಯಕಶ್ಚಿತ್ ಶಾಸಕನೊಂದಿಗೆ ತಾಸುಗಟ್ಟಲೆ ಮಾತಾಡಲು ಏನಿರುತ್ತೆ ಅಂತ ಅಲ್ಲಿದ್ದವರಲ್ಲಿ ಯಾರೂ ಕೇಳದೆ ಹೋಗಿದ್ದು ಯತ್ನಾಳ್ ಪುಣ್ಯ!

ಬೆಂಗಳೂರು: ಕೆಲದಿನಗಳಿಂದ ಮುಗುಮ್ಮಾಗಿದ್ದ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಪುನಃ ಗುಡುಗಲಾರಂಭಿಸಿದ್ದಾರೆ. ಉದ್ಯೋಗ ನೇಮಕಾತಿಗಳಲ್ಲಿ ಪಂಚಮಸಾಲಿ ಸಮುದಾಯಕ್ಕಾಗಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿಗಳ (Sri Jaya Mruthyunjaya Swamiji) ನೇತೃತ್ವದಲ್ಲಿ ನಡೆಯುತ್ತಿರುವ ನಿರಶನದಲ್ಲಿ ಪಾಲ್ಗೊಂಡು ಮಾತಾಡಿದ ಯತ್ನಾಳ್ ತಮ್ಮ ಎಂದಿನ ಧಾಟಿಯಲ್ಲೇ ಗುಡುಗಿದರು. ಪಂಚಮಸಾಲಿ ಸಮುದಾಯದ ಬೇಡಿಕೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಪರಿಶೀಲಿಸುವ ಆಶ್ವಾಸನೆ ನೀಡಿದ್ದಾರೆಂದು ಯತ್ನಾಳ್ ಹೇಳಿದರು. ರಾಜ್ಯ ಸಚಿವ ಸಂಪುಟದ ನಂಬರ್ ವನ್, ನಂಬರ್ ಟೂಗಳಿಗೆ ಪ್ರಧಾನಿಗಳು ಕೇವಲ 5 ನಿಮಿಷಗಳ ಅಪಾಯಿಂಟ್ಮೆಂಟ್ ಮಾತ್ರ ನೀಡುತ್ತಾರೆ, ಆದರೆ ತನ್ನೊಂದಿಗೆ ಮಾತ್ರ ತಾಸುಗಟ್ಟಲೆ ಮಾತಾಡುತ್ತಾರೆ ಎಂದು ಯತ್ನಾಳ್ ಹೇಳಿದರು. ದೇಶದ ಪ್ರಧಾನ ಮಂತ್ರಿಗೆ ರಾಜ್ಯವೊಂದರ ಯಕಶ್ಚಿತ್ ಶಾಸಕನೊಂದಿಗೆ ತಾಸುಗಟ್ಟಲೆ ಮಾತಾಡಲು ಏನಿರುತ್ತೆ ಅಂತ ಅಲ್ಲಿದ್ದವರಲ್ಲಿ ಯಾರೂ ಕೇಳದೆ ಹೋಗಿದ್ದು ಯತ್ನಾಳ್ ಪುಣ್ಯ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 03, 2023 04:58 PM