ಶಾಸಕಾಂಗ ಪಕ್ಷದ ಸಭೆ ಬಹಿಷ್ಕರಿಸಿ ಹೊರಬಂದ ಬಸನಗೌಡ ಯತ್ನಾಳ್, ಅರವಿಂದ್ ಬೆಲ್ಲದ್ ಮತ್ತು ಜಾರಕಿಹೊಳಿ!

Updated on: Nov 17, 2023 | 7:14 PM

ಯಾಕೆ ಬಂದರು, ಒಳಗಡೆ ಏನು ನಡೆಯಿತು ಅಂತ ನಿಖರವಾಗಿ ಗೊತ್ತಾಗಿಲ್ಲ. ಯಾಕೆ ಸರ್ ಆಚೆ ಬಂದಿದ್ದು ಅಂತ ಮಾಧ್ಯಮದವರು ಕೇಳಿದಾಗ ಚಹಾ ಕುಡಿಯುವ ಅಂತ ಬಂದಿದ್ದೀವಿ ಅನ್ನುತ್ತಾರೆ. ಅಲ್ಲಾ ಸಾರ್ ಇಲ್ಲೇ ಹೋಟೆಲ್ ನಲ್ಲಿ ಕುಡಿಯಬಹುದಿತ್ತಲ್ಲ ಅಂದಾಗ, ಇಲ್ಲಿ ಟೀ ಬಹಳ ದುಬಾರಿ ನಮ್ಮಂಥ ಬಡವರು ಅಫೋರ್ಡ್ ಮಾಡಕ್ಕಾಗಲ್ಲ ಅನ್ನುತ್ತಾರೆ.

ಬೆಂಗಳೂರು: ಇದನ್ನು ನಿರೀಕ್ಷಿಸಲಾಗುತ್ತೇ? ಇಲ್ಲ ಮಾರಾಯ್ರೇ. ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅಕ್ಷರಶಃ ರೆಬೆಲ್ ಆಗಿದ್ದಾರೆ. ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಖಾಸಗಿ ಹೋಟೆಲೊಂದರಲ್ಲಿ ಇವತ್ತು ಕರೆದಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ಬಸನಗೌಡ ಪಾಟೀಲ್ ಯತ್ನಾಳ್ ಸರಿಯಾದ ಸಮಯಕ್ಕೆ ಅಗಮಿಸಿದ್ದೇನೋ ನಿಜ; ಆದರೆ ಅಲ್ಲಿಂದ ಕೂಡಲೇ ವಾಪಸ್ಸು ಕೂಡ ಹೊರಟರು! ಹೌದು, ಸಭೆ ಆರಂಭವಾವಗುವ ಮೊದಲೇ ಅವರು ಹೊರಬಂದರು. ಯಾಕೆ ಬಂದರು, ಒಳಗಡೆ ಏನು ನಡೆಯಿತು ಅಂತ ನಿಖರವಾಗಿ ಗೊತ್ತಾಗಿಲ್ಲ. ಯಾಕೆ ಸರ್ ಆಚೆ ಬಂದಿದ್ದು ಅಂತ ಮಾಧ್ಯಮದವರು ಕೇಳಿದಾಗ ಚಹಾ ಕುಡಿಯುವ ಅಂತ ಬಂದಿದ್ದೀವಿ ಅನ್ನುತ್ತಾರೆ. ಅಲ್ಲಾ ಸಾರ್ ಇಲ್ಲೇ ಹೋಟೆಲ್ ನಲ್ಲಿ ಕುಡಿಯಬಹುದಿತ್ತಲ್ಲ ಅಂದಾಗ, ಇಲ್ಲಿ ಟೀ ಬಹಳ ದುಬಾರಿ (expensive) ನಮ್ಮಂಥ ಬಡವರು ಅಫೋರ್ಡ್ ಮಾಡಕ್ಕಾಗಲ್ಲ ಅನ್ನುತ್ತಾರೆ.

ಇವತ್ತು ದಿನವೆಲ್ಲ ಅವರು ಬಿಎಸ್ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದರ ಪರಿಣಾಮವೇ ಇದು? ಯತ್ನಾಳ್ ಅವರೊಂದಿಗೆ ಅರವಿಂದ್ ಬೆಲ್ಲದ್ ಮತ್ತು ರಮೇಶ್ ಜಾರಕಿಹೊಳಿ ಸಹ ಆಚೆ ಬಂದಿರುವುದನ್ನು ನೋಡಬಹುದು. ವಿಜಯೇಂದ್ರ ಆಯ್ಕೆ ಬಗ್ಗೆ ಇದ್ದ ಅಸಮಾಧಾನ ಸ್ಫೋಟಗೊಂಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More