ವಕ್ಫ್ ಬೋರ್ಡ್ ವಿರುದ್ಧ ಎರಡನೇ ಹಂತದ ಹೋರಾಟ ಶುರುಮಾಡಿದ ಬಸನಗೌಡ ಯತ್ನಾಳ್ ಮತ್ತು ತಂಡ
ಇವತ್ತು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಾನೇ ವಕ್ಫ್ ಬೋರ್ಡ್ ವಿರುದ್ಧ ಹೋರಾಟ ನಿಲ್ಲಿಸಲು ಹೇಳಿದ್ದೆ ಎಂದಿದ್ದರು. ಎರಡನೇ ಹಂತದ ಹೋರಾಟ ಮಾಡಲು ಪ್ರಾಯಶಃ ಯತ್ನಾಳ್ ತಂಡ ದೆಹಲಿ ವರಿಷ್ಠರಿಂದ ಅನುಮತಿ ಪಡೆದಿರಬಹುದು. ಯಾಕೆಂದರೆ ವಿಜಯೇಂದ್ರ ಇಂದು ಮಾತಾಡುವಾಗ ಎರಡನೇ ಹಂತದ ಹೋರಾಟದ ಬಗ್ಗೆ ಹೇಳಲಿಲ್ಲ.
ಬಳ್ಳಾರಿ: ವಕ್ಫ್ ಬೋರ್ಡ್ ವಿರುದ್ಧ ಎರಡನೇ ಸುತ್ತಿನ ಹೋರಾಟವನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ತಂಡ ಇವತ್ತಿನಿಂದ ಶುರುಮಾಡಿದೆ. ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಸ್ಥಳೀಯ ಬಿಜೆಪಿ ಮುಖಂಡರು ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದಿಂದ ಹೋರಾಟ ಆರಂಭಿಸಿದರು. ಸ್ಥಳೀಯ ಉದ್ಭವ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಅಲ್ಲಿಂದ ಶಾರದಾ ಶಾಲೆಯವರೆಗೆ ರ‍್ಯಾಲಿ ನಡೆಸಲಾಯಿತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಯತ್ನಾಳ್ ನಡೆಗೆ ಬಿವೈ ವಿಜಯೇಂದ್ರ ಡೋಂಟ್ಕೇರ್: ಬಿಜೆಪಿ ಬಣ ಬಡಿದಾಟ ಮತ್ತೊಂದು ಹಂತಕ್ಕೆ