ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಮಡುಗಟ್ಟಿದ್ದ ಅಸಮಾಧಾನವನ್ನು ಬಸನಗೌಡ ಯತ್ನಾಳ್ ಹೊರಹಾಕಿದರು!

|

Updated on: Nov 17, 2023 | 4:27 PM

ಈ ಸಂದರ್ಭದಲ್ಲಿ ಅವರು ದಿವಂಗತ ಅಟಲ್ ಬಿಹಾರಿ ವಾಜಪೇಯಿ ಒಮ್ಮೆ ಸಂಸತ್ತಿನಲ್ಲಿ ಹೇಳಿದ ಮಾತನ್ನು ಉಲ್ಲೇಖಿಸಿದರು. ನಿನ್ನೊಂದಿಗೆ ಯಾರೂ ಇಲ್ಲದಿದ್ದರೂ ಒಬ್ಬನೇ ಮುನ್ನುಗ್ಗು, ಆಗ ಜಗತ್ತೇ ನಿನ್ನ ಹಿಂದೆ ಬರುತ್ತದೆ ಅಂತ ಅವರು ಹೇಳಿದ್ದನ್ನು ಪಾಲಿಸಿಕೊಂಡು ಸಾಗುತ್ತಿರುವುದಾಗಿ ಶಾಸಕ ಹೇಳಿದರು. ರಾಜ್ಯದ ಎಲ್ಲ ಬಿಜೆಪಿ ನಾಯಕರ ಹುಳುಕುಗಳನ್ನು ವೀಕ್ಷಕರ ಮುಂದೆ ಬಯಲು ಮಾಡಿದ್ದಾಗಿ ಯತ್ನಾಳ್ ಹೇಳಿದರು.

ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಬಿವೈ ವಿಜಯೇಂದ್ರ (BY Vijayendra) ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಮಾಧ್ಯಮದೆದುರು ಪ್ರತ್ಯಕ್ಷರಾದರು. ವಿಜಯಪುರ ಶಾಸಕ ಹೊರಗೆ ಕಾಣಿಸಿಕೊಳ್ಳಬೇಕಾದರೆ ದೆಹಲಿಯಿಂದ ವೀಕ್ಷಕರಾಗಿ ಆಗಮಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮತ್ತು ದುಷ್ಯಂತ್ ಕುಮಾರ್ ಗೌತಮ್  (Dushyant Kumar Goutam) ಅವರ ಮನೆಗೆ ಭೇಟಿ ನೀಡಬೇಕಾಯಿತು. ಯತ್ನಾಳ್ ಅವರಲ್ಲಿ ಯಾವ ಪರಿ ಅಸಮಾಧಾನ ಮಡುಗಟ್ಟಿದೆ ಅನ್ನೋದು ಅವರ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ವಿಜಯೇಂದ್ರ ಮತ್ತು ಬಿಎಸ್ ಯಡಿಯೂರಪ್ಪ ವಿರುದ್ಧ ಅವರು ಬಳಸುವ ಪದಗಳನ್ನು ಗಮನಿಸಿ. ಪರೋಕ್ಷವಾಗಿ ಅವರು ತಾನು ಬೇರೆಯವರ ಹಾಗೆ ಥರ್ಡ್ ಕ್ಲಾಸ್ ರಾಜಕಾರಣಿ ಅಲ್ಲ, ಅವರಂತೆ ಅಧ್ಯಕ್ಷ ಸ್ಥಾನ ಬೇಕು, ವಿಪಕ್ಷ ನಾಯಕನ ಸ್ಥಾನ ಬೇಕು ಅಂತ ಕೇಳೋದಿಲ್ಲ. ಅವರ ಹಾಗೆ ರಾಜಕಾರಣ ಮಾಡಿದ್ದರೆ, ಕೊಳಗೇರಿಯಲ್ಲಿ ಮನೆ ಕಟ್ಟಿಕೊಳ್ಳುವ ಸ್ಥಿತಿ ತನಗಿರುತ್ತಿರಲಿಲ್ಲ ಎಂದು ಯತ್ನಾಳ್ ಹೇಳಿದರು. ಈ ಸಂದರ್ಭದಲ್ಲಿ ಅವರು ದಿವಂಗತ ಅಟಲ್ ಬಿಹಾರಿ ವಾಜಪೇಯಿ ಒಮ್ಮೆ ಸಂಸತ್ತಿನಲ್ಲಿ ಹೇಳಿದ ಮಾತನ್ನು ಉಲ್ಲೇಖಿಸಿದರು. ನಿನ್ನೊಂದಿಗೆ ಯಾರೂ ಇಲ್ಲದಿದ್ದರೂ ಒಬ್ಬನೇ ಮುನ್ನುಗ್ಗು, ಆಗ ಜಗತ್ತೇ ನಿನ್ನ ಹಿಂದೆ ಬರುತ್ತದೆ ಅಂತ ಅವರು ಹೇಳಿದ್ದನ್ನು ಪಾಲಿಸಿಕೊಂಡು ಸಾಗುತ್ತಿರುವುದಾಗಿ ಶಾಸಕ ಹೇಳಿದರು. ರಾಜ್ಯದ ಎಲ್ಲ ಬಿಜೆಪಿ ನಾಯಕರ ಹುಳುಕುಗಳನ್ನು ವೀಕ್ಷಕರ ಮುಂದೆ ಬಯಲು ಮಾಡಿದ್ದಾಗಿ ಯತ್ನಾಳ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 17, 2023 04:27 PM