ಶೋಕಾಸ್ ನೋಟೀಸ್ ನಂತರ ಮೆತ್ತಗಾದ ಯತ್ನಾಳ್, ವಕ್ಫ್ ಹೋರಾಟ ಬಿಜೆಪಿ ಬ್ಯಾನರ್ ಅಡಿ ಮುಂದುವರಿಸಲು ನಿರ್ಧಾರ
ಬಿವೈ ವಿಜಯೇಂದ್ರ ಕರೆದಿರುವ ಡಿನ್ನರ್ ಪಾರ್ಟಿಗೆ ತಾನು ಹೋಗುತ್ತಿಲ್ಲ, ಯಾರೇ ಊಟಕ್ಕೆ ಕರೆದಾಗ ಹೋಗೋದು ಬಿಡೋದು ತನ್ನ ವೈಯಕ್ತಿಕ ವಿಚಾರ ಎಂದ ಯತ್ನಾಳ್, ವಿಜಯೇಂದ್ರರನ್ನು ಟೀಕಿಸುವುವುದನ್ನು ಬಿಡದೆ ಮುಂದಿನಿಂದ ನಮಸ್ಕಾರ ಹೇಳುವವರನ್ನು ಯಾವತ್ತೂ ನಂಬಬಾರದು, ಯಾವಾಗ ಹಿಂದಿನಿಂದ ಚೂರಿ ಹಾಕ್ತಾರೋ ಗೊತ್ತಾಗದು ಎಂದರು.
ಬೆಳಗಾವಿ: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ಈಗಾಗಲೇ ಹೇಳಿರುವಂತೆ ವಿಧಾನಸಭಾ ಆಧಿವೇಶನದ ನಂತರ ವಕ್ಫ್ ವಿರುದ್ಧ ಹೋರಾಟ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಮುಂದುವರಿಯಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಕೇವಲ ವಕ್ಫ್ ಮಾತ್ರವಲ್ಲ, ವಾಲ್ಮೀಕಿ ನಿಗಮ ಅವ್ಯವಹಾರ, ಪರಿಶಿಷ್ಟ ಜಾತಿ ನಿಗಮದಿಂದ ₹ 24,000ಕೋಟಿ ಬೇರೆಡೆ ಡೈವರ್ಟ್ ಮಾಡಿರುವುದು, ಸರ್ಕಾರದ ವೈಫಲ್ಯಗಳ ವಿರುದ್ಧವೂ ಹೋರಾಟ ನಡೆಸಲಾಗುವುದು, ಬಿಜೆಪಿ ಬ್ಯಾನರ್ ಅಡಿಯಲ್ಲಿ ನಡೆಯುವ ಹೋರಾಟಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾದಿಯಾಗಿ ಎಲ್ಲರಿಗೂ ಆಹ್ವಾನ ನೀಡಲಾಗಿದೆ ಎಂದು ಯತ್ನಾಳ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮತ್ತೆ ಸೈಲೆಂಟ್, ವೈಲೆಂಟ್ ಆಟ ಮುಂದುವರಿಸಿದ ಯತ್ನಾಳ್ ಟೀಂ: ಬೆಳಗಾವಿಯಲ್ಲಿ ರೆಬೆಲ್ಸ್ ಮಹತ್ವದ ಸಭೆ