ಬಸವಕಲ್ಯಾಣ (ಬೀದರ್): ಕಾಡಿನಿಂದ ಊರೊಳಗೆ ಬಂದ ಕೃಷ್ಣಮೃಗವನ್ನು ಕಂಡು ನಾಯಿಗಳು ಬೆನ್ನಟ್ಟಿದವು!

ಬಸವಕಲ್ಯಾಣ (ಬೀದರ್): ಕಾಡಿನಿಂದ ಊರೊಳಗೆ ಬಂದ ಕೃಷ್ಣಮೃಗವನ್ನು ಕಂಡು ನಾಯಿಗಳು ಬೆನ್ನಟ್ಟಿದವು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 16, 2022 | 4:35 PM

ಕೊನೆಗೆ ಅರಣ್ಯ ಇಲಾಖೆಯವರಿಗೆ ವಿಷಯ ಗೊತ್ತಾಗಿ ಅದರ ಮೈಮೇಲೆ ಆಗಿದ್ದ ಸಣ್ಣಪುಟ್ಟ ಗಾಯಗಳಿಗೆ ಚಿಕಿತ್ಸೆ ಕೊಡಿಸಿ ಕಾಡಿಗೆ ಒಯ್ದುಬಿಟ್ಟಿದ್ದಾರೆ.

ಬಸವಕಲ್ಯಾಣ (ಬೀದರ್): ಕಾಡಿನಿಂದ ಕೇವಲ ಆನೆ ಮತ್ತು ಹಿಂಸ್ರಪಶುಗಳು ಮಾತ್ರ ನಾಡಿಗೆ ಬರುತ್ತಿವೆ ಅಂತ ನೀವಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಈ ವಿಡಿಯೋ ನೋಡಿದರೆ ನಾವ್ಯಾಕೆ ಹೀಗೆ ಹೇಳುತ್ತಿದ್ದೇವೆ ಅನ್ನೋದು ಗೊತ್ತಾಗುತ್ತದೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದಲ್ಲಿ ಗುರುವಾರ ರಾತ್ರಿ ಅದ್ಹೇಗೋ ಒಂದು ಕೃಷ್ಣಮೃಗ ಊರೊಳಗೆ ಬಂದುಬಿಟ್ಟಿದೆ. ತಮ್ಮ ವಾಸಸ್ಥಳದಲ್ಲಿ ಅಪರಿಚಿತ ಪ್ರಾಣಿಯೊಂದನ್ನು ನೋಡಿದ ನಾಯಿಗಳು ಅದರ ಬೆನ್ನಟ್ಟಿವೆ. ನಾಯಿಗಳಿಂದ ತಪ್ಪಿಸಿಕೊಳ್ಳುತ್ತಾ ಜೀವಭಯದಿಂದ ಓಡಿದ ನಾಯಿ ಕೊನೆಗೆ ಖಾಸಗಿ ಅಸ್ಪತ್ರೆಯನ್ನು ಹೊಕ್ಕಿದೆ. ಆಗಲೇ ಸ್ಥಳೀಯರು ಅದರ ರಕ್ಷಣೆಗೆ ಧಾವಿಸಿದ್ದಾರೆ. ಕೊನೆಗೆ ಅರಣ್ಯ ಇಲಾಖೆಯವರಿಗೆ ವಿಷಯ ಗೊತ್ತಾಗಿ ಅದರ ಮೈಮೇಲೆ ಆಗಿದ್ದ ಸಣ್ಣಪುಟ್ಟ ಗಾಯಗಳಿಗೆ ಚಿಕಿತ್ಸೆ ಕೊಡಿಸಿ ಕಾಡಿಗೆ ಒಯ್ದುಬಿಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ