ಬಸವನಗುಡಿ ಕಡಲೆಕಾಯಿ ಪರಿಷೆ: 10 ಲಕ್ಷ ರೂ. ಕೂಗಿದವರನ್ನು ಬಿಟ್ಟು, 8 ಲಕ್ಷ ರೂ. ಎಂದವರಿಗೆ ಟೆಂಡರ್ ಕೊಟ್ಟ ಅಧಿಕಾರಿಗಳು
ಬಸವನಗುಡಿ ದೊಡ್ಡಗಣಪತಿ ದೇಗುಲದ ಆವರಣದಲ್ಲಿ ನಡೆಯುವ ಕಡಲೆಕಾಯಿ ಪರಿಷೆ ಟೆಂಡರ್ ಕೈತಪ್ಪಿದ್ದಕ್ಕೆ ದೇಗುಲದ ಮುಂದೆ ವ್ಯಾಪಾರಿ ಲತಾ ದಂಪತಿ ಕಣ್ಣೀರು ಹಾಕಿದ್ದಾರೆ.
ಬೆಂಗಳೂರು: ನಗರದ ಬಸವನಗುಡಿಯ ದೊಡ್ಡಗಣಪತಿ (Basavanagudi Groundnut Parishe) ಜಾತ್ರೆಗೂ ಮುನ್ನವೇ ಟೆಂಡರ್ ಗಲಾಟೆ ನಡೆದಿದ್ದು, 10 ಲಕ್ಷ ರೂ. ಹಣವಿಟ್ಟು ಮಹಿಳೆ ಗೋಳಾಡಿದ್ದಾರೆ. ಟೆಂಡರ್ ಪ್ರಕ್ರಿಯೆಯಲ್ಲಿ ವ್ಯಾಪಾರಿ ಲತಾ ದಂಪತಿ ಭಾಗಿಯಾಗಿ 10 ಲಕ್ಷಕ್ಕೆ ಕೂಗಿದ್ದಾರೆ. ಆದರೆ 10 ಲಕ್ಷಕ್ಕೆ ಟೆಂಡರ್ ಕೂಗಿದ್ದವರನ್ನು ಬಿಟ್ಟು 8 ಲಕ್ಷ ರೂ. ಕೂಗಿದವರಿಗೆ ಅಧಿಕಾರಿಗಳು ಟೆಂಡರ್ ನೀಡಿದ್ದಾರೆ. ಮುಜರಾಯಿ ಇಲಾಖೆ ಅಧಿಕಾರಿಗಳ ಕಳ್ಳಾಟ ಪ್ರಶ್ನಿಸಿದ್ದಕ್ಕೆ ಲತಾರನ್ನು ನಿಂದನೆ ಮಾಡಲಾಗಿದೆ. ಬಸವನಗುಡಿ ದೊಡ್ಡಗಣಪತಿ ದೇಗುಲದ ಆವರಣದಲ್ಲಿ ನಡೆಯುವ ಕಡಲೆಕಾಯಿ ಪರಿಷೆ ಟೆಂಡರ್ ಕೈತಪ್ಪಿದ್ದಕ್ಕೆ ದೇಗುಲದ ಮುಂದೆ ವ್ಯಾಪಾರಿ ಲತಾ ದಂಪತಿ ಕಣ್ಣೀರು ಹಾಕಿದ್ದಾರೆ. ಇನ್ನು ಈ ವಿಚಾರ ಮುಜರಾಯಿ ಇಲಾಖೆಯ ಆಯುಕ್ತೆ ರೋಹಿಣಿ ಸಿಂಧೂರಿ ಅವರಿಗೆ ತಿಳಿಯುತ್ತಿದ್ದಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos