ಸರ್ವಪಕ್ಷ ಸಭೆಯಲ್ಲಿ ಪಕ್ಕದಲ್ಲೇ ಕುಳಿತಿದ್ದ ಜಗದೀಶ್ ಶೆಟ್ಟರ್​ರನ್ನು ಬಸವರಾಜ ಬೊಮ್ಮಾಯಿ ಮತ್ತು ಸದಾನಂದ ಗೌಡ ಬಹಳ ಹೊತ್ತು ಇಗ್ನೋರ್ ಮಾಡಲಾಗಲಿಲ್ಲ!

|

Updated on: Aug 23, 2023 | 2:12 PM

ಒಂದೇ ಸಾಲಿನಲ್ಲಿ ಕುಳಿತಿದ್ದರೂ ಶೆಟ್ಟರ್-ಬೊಮ್ಮಾಯಿ-ಸದಾನಂದಗೌಡ ಸ್ವಲ್ಪ ಹೊತ್ತಿನವರೆಗೆ ಪರಸ್ಪರ ಇಗ್ನೋರ್ ಮಾಡುತ್ತಾರೆ. ಕಾರಣ ಏನು ಅಂತ ಕನ್ನಡಿಗರಿಗೆಲ್ಲ ಗೊತ್ತು. ಒಬ್ಬರು ಬಲಕ್ಕೆ ತಿರುಗಿದಾಗ ಇನ್ನೊಬ್ಬರು ಎಡಕ್ಕೆ ತಿರುಗೋದು, ಮುಂದಕ್ಕೆ ಬಾಗಿದಾಗ ಹಿಂದಕ್ಕೆ ವಾಲುವುದು-ಹೀಗೆ ಕಣ್ಣಾಮುಚ್ಚಾಲೆ ಆಟ ನಡೆಯುತ್ತದೆ. ಆದರೆ ಆಟವನ್ನು ಬಹಳ ಸಮಯದವರೆಗೆ ಆಡಲಾಗದು ಅಂತ ಬೊಮ್ಮಾಯಿಯವರಿಗೆ ಮೊದಲು ಮನವರಿಕೆಯಾಗುತ್ತದೆ

ಬೆಂಗಳೂರು: ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಮಿತ್ರರೂ ಅಲ್ಲ-ಇದು ರಾಜಕಾರಣದ ಇತಿಹಾಸದಷ್ಟೇ ಹಳೆಯ ಮಾತು. ಇದನ್ನು ಪದೇಪದೆ ನಾವು ಹೇಳುತ್ತಿರುತ್ತೇವೆ. ಅಂಥ ಸಂದರ್ಭಗಳು ಸೃಷ್ಟಿಯಾದಾಗ ನಾವಾದರೂ ಏನು ಮಾಡೋಕ್ಕಾಗುತ್ತೆ ಮಾರಾಯ್ರೇ? ಇಲ್ಲಿ ಒಂದೇ ಸಾಲಿನಲ್ಲಿ ಕುಳಿತಿರುವ ಗಣ್ಯರನ್ನು ನೋಡಿ, ಜಗದೀಶ್ ಶೆಟ್ಟರ್ (Jagadish Shettar), ಎಂ ವೀರಪ್ಪ ಮೊಯ್ಲಿ (M Veerappa Moily), ಡಿವಿ ಸದಾನಂದ ಗೌಡ (DV Sadananda Gowda) ಮತ್ತು ಬಸವರಾಜ ಬೊಮ್ಮಾಯಿ (Basavaraj Bommai). ಇವರ ನಡುವಿನ ಕಾಮನ್ ಸಂಗತಿಯನ್ನು ಗಮನಿಸಿದಿರಾ? ಎಲ್ಲರೂ ರಾಜ್ಯದ ಮುಖ್ಯಂತ್ರಿಗಳಾಗಿದ್ದವರು. ಓಕೆ, ಒಂದೇ ಸಾಲಿನಲ್ಲಿ ಕುಳಿತಿದ್ದರೂ ಶೆಟ್ಟರ್-ಬೊಮ್ಮಾಯಿ-ಸದಾನಂದಗೌಡ ಸ್ವಲ್ಪ ಹೊತ್ತಿನವರೆಗೆ ಪರಸ್ಪರ ಇಗ್ನೋರ್ ಮಾಡುತ್ತಾರೆ. ಕಾರಣ ಏನು ಅಂತ ಕನ್ನಡಿಗರಿಗೆಲ್ಲ ಗೊತ್ತು. ಒಬ್ಬರು ಬಲಕ್ಕೆ ತಿರುಗಿದಾಗ ಇನ್ನೊಬ್ಬರು ಎಡಕ್ಕೆ ತಿರುಗೋದು, ಮುಂದಕ್ಕೆ ಬಾಗಿದಾಗ ಹಿಂದಕ್ಕೆ ವಾಲುವುದು-ಹೀಗೆ ಕಣ್ಣಾಮುಚ್ಚಾಲೆ ಆಟ ನಡೆಯುತ್ತದೆ. ಆದರೆ ಆಟವನ್ನು ಬಹಳ ಸಮಯದವರೆಗೆ ಆಡಲಾಗದು ಅಂತ ಬೊಮ್ಮಾಯಿಯವರಿಗೆ ಮೊದಲು ಮನವರಿಕೆಯಾಗುತ್ತದೆ. ಶೆಟ್ಟರ್ ಮತ್ತು ಸದಾನಂದ ಗೌಡ ಸಹ ಈ ಅಂಶವನ್ನು ಅರಿತುಕೊಳ್ಳುತ್ತಾರೆ. ಆಮೇಲೆ ಮೂವರು ಪರಸ್ಪರ ನಮಸ್ಕರಿಸಿಕೊಳ್ಳುತ್ತಾ ಯೋಗಕ್ಷೇಮ ವಿಚಾರಿಸುತ್ತಾರೆ!

ಮತ್ತಷ್ಟು ಕನ್ನಡ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ