ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ

Updated on: Dec 26, 2025 | 9:18 PM

ಈ ವಾರ ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋನಲ್ಲಿ ಫ್ಯಾಮಿಲಿ ವೀಕ್ ನಡೆಯುತ್ತಿದೆ. ಸ್ಪರ್ಧಿಗಳ ಕುಟುಂಬದ ಸದಸ್ಯರು ಬಿಗ್ ಬಾಸ್ ಮನೆಗೆ ಬಂದು ಮಾತನಾಡುತ್ತಿದ್ದಾರೆ. ಸ್ಪಂದನಾ ಅವರ ತಂದೆ, ತಾಯಿ ಸಹ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ. ಮಗಳ ಬಗ್ಗೆ ಮಾತಾಡಿದ್ದಾರೆ.

ನಟಿ ಸ್ಪಂದನಾ ಸೋಮಣ್ಣ (Spandana Somanna) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಕಿರುತೆರೆ ಧಾರಾವಾಹಿಗಳ ಮೂಲಕವೂ ಅವರು ಜನಪ್ರಿಯತೆ ಪಡೆದಿದ್ದಾರೆ. ಅವರ ರಿಯಲ್ ಲೈಫ್ ಬಗ್ಗೆ ಅಭಿಮಾನಿಗಳಿಗೆ ಹೆಚ್ಚೇನೂ ತಿಳಿದಿಲ್ಲ. ಈ ವಾರ ಬಿಗ್ ಬಾಸ್ (BBK 12) ಶೋನಲ್ಲಿ ಫ್ಯಾಮಿಲಿ ವೀಕ್ ನಡೆಯುತ್ತಿದೆ. ಸ್ಪರ್ಧಿಗಳ ಫ್ಯಾಮಿಲಿ ಸದಸ್ಯರು ಬಿಗ್ ಬಾಸ್ ಮನೆಗೆ ಬಂದು ಮಾತನಾಡುತ್ತಿದ್ದಾರೆ. ಸ್ಪಂದನಾ ಅವರ ಪೋಷಕರು ಕೂಡ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ. ಮಗಳ ಬಾಲ್ಯದಲ್ಲಿ ನಡೆದ ಒಂದು ಶಾಕಿಂಗ್ ಘಟನೆಯನ್ನು ಅವರು ವಿವರಿಸಿದ್ದಾರೆ. ಡಿಸೆಂಬರ್ 26ರ ಸಂಚಿಕೆಯ ಈ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿಯ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.