AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VHT 2025-26: 2 ಪಂದ್ಯಗಳನ್ನಾಡಿ ಡೆಲ್ಲಿ ತಂಡವನ್ನು ತೊರೆದ ವಿರಾಟ್ ಕೊಹ್ಲಿ

VHT 2025-26: 2 ಪಂದ್ಯಗಳನ್ನಾಡಿ ಡೆಲ್ಲಿ ತಂಡವನ್ನು ತೊರೆದ ವಿರಾಟ್ ಕೊಹ್ಲಿ

ಪೃಥ್ವಿಶಂಕರ
|

Updated on: Dec 26, 2025 | 10:55 PM

Share

Virat Kohli's Vijay Hazare Trophy Exit: ವಿಜಯ್ ಹಜಾರೆ ಟ್ರೋಫಿಯಲ್ಲಿ ಡೆಲ್ಲಿ ಪರ ವಿರಾಟ್ ಕೊಹ್ಲಿ ಎರಡು ಪಂದ್ಯಗಳಲ್ಲಿ 208 ರನ್ ಗಳಿಸಿ ಅಮೋಘ ಪ್ರದರ್ಶನ ನೀಡಿದ್ದಾರೆ. ಇದೀಗ ಅವರು ಕುಟುಂಬದೊಂದಿಗೆ ಹೊಸ ವರ್ಷಾಚರಣೆಗಾಗಿ ತಂಡದಿಂದ ತಾತ್ಕಾಲಿಕ ವಿರಾಮ ಪಡೆದು ಮನೆಗೆ ಮರಳಿದ್ದಾರೆ. ಕೊಹ್ಲಿ ಜನವರಿ 6 ರಂದು ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ಮತ್ತೆ ಕಣಕ್ಕಿಳಿಯುವ ನಿರೀಕ್ಷೆಯಿದೆ. ಅವರ ಬೆಂಗಳೂರು ವಿಮಾನ ನಿಲ್ದಾಣದ ವಿಡಿಯೋ ವೈರಲ್ ಆಗಿದೆ.

ವಿಜಯ್ ಹಜಾರೆ ಟ್ರೋಫಿಯಲ್ಲಿ ಡೆಲ್ಲಿ ತಂಡದ ಪರ ಎರಡು ಪಂದ್ಯಗಳಲ್ಲಿ ಕಣಕ್ಕಿಳಿದು ಅಮೋಘ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ ಇದೀಗ ತಂಡವನ್ನು ತೊರೆದು ಮನೆಗೆ ವಾಪಸ್ಸಾಗಿದ್ದಾರೆ. ಕೊಹ್ಲಿ ತಂಡದಿಂದ ಬೇರ್ಪಟ್ಟು, ದೆಹಲಿಗೆ ಮರಳಲು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಿಸಿಸಿಐ ಆದೇಶದ ಪ್ರಕಾರ ಈ ಟೂರ್ನಿಯಲ್ಲಿ 2 ಪಂದ್ಯಗಳನ್ನಾಡಿದ ವಿರಾಟ್, ಮನೆಗೆ ವಾಪಸ್ಸಾಗಿದ್ದಾರೆ. ಆದಾಗ್ಯೂ ಕೊಹ್ಲಿ ಮುಂದಿನ ದಿನಗಳಲ್ಲಿ ಈ ಟೂರ್ನಿಯಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ವಾಸ್ತವವಾಗಿ ಡೆಲ್ಲಿ ತಂಡದ ಮುಂದಿನ 3 ಪಂದ್ಯಗಳಲ್ಲಿ ಕೊಹ್ಲಿ ಆಡುವುದಿಲ್ಲ. ಕುಟುಂಬದೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಲುವಾಗಿ ವಿರಾಮ ತೆಗೆದುಕೊಂಡಿದ್ದಾರೆ.

ಆ ಬಳಿಕ ಜನವರಿ 6 ರಂದು ಡೆಲ್ಲಿ ತಂಡ ರೈಲ್ವೇಸ್ ವಿರುದ್ಧ ತನ್ನ ಪಂದ್ಯವನ್ನು ಆಡಲಿದ್ದು, ಆ ಪಂದ್ಯದಲ್ಲಿ ವಿರಾಟ್ ಆಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ವಿಜಯ್ ಹಜಾರೆ ಟ್ರೋಫಿಯಲ್ಲಿ ಎರಡು ಪಂದ್ಯಗಳನ್ನಾಡಿದ ವಿರಾಟ್ ಕೊಹ್ಲಿ 104 ಸರಾಸರಿಯಲ್ಲಿ 208 ರನ್ ಗಳಿಸಿದರು. ಆಂಧ್ರಪ್ರದೇಶ ವಿರುದ್ಧದ ಪಂದ್ಯದಲ್ಲಿ 131 ರನ್ ಬಾರಿಸಿದ್ದ ವಿರಾಟ್, ಗುಜರಾತ್ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸಲು ವಿಫಲರಾದರೂ 77 ರನ್​ಗಳ ಗೆಲುವಿನ ಇನ್ನಿಂಗ್ಸ್ ಆಡಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ