ಗಂಡ ಬೇಕಾದ್ರೆ ಹೋಗಲಿ, ನಾನು ವಿಡಿಯೋ ಮಾಡೋದು ನಿಲ್ಲಿಸಲ್ಲ: ರಕ್ಷಿತಾ ಶೆಟ್ಟಿ

Updated on: Nov 27, 2025 | 3:31 PM

ತಮ್ಮ ಗಂಡ ಹೇಗಿರಬೇಕು ಎಂಬುದನ್ನು ರಕ್ಷಿತಾ ಶೆಟ್ಟಿ ಅವರು ಹೇಳಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನ ನವೆಂಬರ್ 27ರ ಸಂಚಿಕೆಯ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ಅದರಲ್ಲಿ ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯ ಅತಿಥಿಗಳ ಜೊತೆ ಮಾತನಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡುವ ಮೂಲಕ ರಕ್ಷಿತಾ ಶೆಟ್ಟಿ ಅವರು ಫೇಮಸ್ ಆದರು. ಅದರಿಂದಾಗಿ ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋನಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿತು. ತಮ್ಮ ಗಂಡ ಹೇಗಿರಬೇಕು ಎಂಬುದನ್ನು ರಕ್ಷಿತಾ ಶೆಟ್ಟಿ ಅವರು ಹೇಳಿದ್ದಾರೆ. ಮದುವೆ ಆದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡೋದು ಬೇಡ ಅಂತ ಗಂಡ ಹೇಳಿದರೆ ಏನು ಮಾಡುತ್ತೀಯಾ ಎಂದು ರಜತ್ ಕೇಳಿದ ಪ್ರಶ್ನೆಗೆ ರಕ್ಷಿತಾ ಶೆಟ್ಟಿ (Rakshitha Shetty) ಉತ್ತರಿಸಿದ್ದಾರೆ. ‘ನನ್ನ ಹಾಗೆ ಇರುವ ಯಾರೂ ಸಿಕ್ಕಿಲ್ಲ. ನನಗೆ ಹಳ್ಳಿ ಹುಡುಗ ಬೇಕು. ತೋಟ ಇರಬೇಕು. ರೈತ ಆಗಿರಬೇಕು. ನಾನು ವಿಡಿಯೋ ಮಾಡುತ್ತಾ ಇಡೀ ದಿನ ಅಲ್ಲಿ ಕಳೆಯಬಹುದು. ಮದುವೆ ನಂತರ ನನಗೆ ಅದೇ ಲೈಫ್ ಬೇಕು. ಮದುವೆ ಆದ ಮೇಲೆ ವಿಡಿಯೋ ಮಾಡೋದು ಬೇಡ ಅಂದರೆ ಅವರು ಇದ್ದರೆ ಇರ್ತಾರೆ, ಹೋದರೆ ಹೋಗ್ತಾರೆ’ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More