AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೀಕರ ಅವಘಡದಿಂದ ಕೂದಲೆಳೆಯ ಅಂತರದಲ್ಲಿ ಆಟಗಾರರು ಪಾರು..!

ಭೀಕರ ಅವಘಡದಿಂದ ಕೂದಲೆಳೆಯ ಅಂತರದಲ್ಲಿ ಆಟಗಾರರು ಪಾರು..!

ಝಾಹಿರ್ ಯೂಸುಫ್
|

Updated on: Dec 29, 2025 | 10:57 AM

Share

Melbourne Stars vs Sydney Thunder: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಡ್ನಿ ಥಂಡರ್ ತಂಡವು 20 ಓವರ್​ಗಳಲ್ಲಿ ಕಲೆಹಾಕಿದ್ದು ಕೇವಲ 128 ರನ್​ಗಳು ಮಾತ್ರ. ಈ ಗುರಿಯನ್ನು ಮೆಲ್ಬೋರ್ನ್​ ಸ್ಟಾರ್ಸ್ ತಂಡವು 14 ಓವರ್​ಗಳಲ್ಲಿ ಚೇಸ್ ಮಾಡಿ 9 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿದೆ.

ಆಟಗಾರರ ನಡುವೆ ಡಿಕ್ಕಿ ಅಪಘಾತಗಳು ಕ್ರೀಡಾಂಗಣಗಳಲ್ಲಿ ಆಗಾಗ್ಗೆ ಸಂಭವಿಸುತ್ತವೆ. ವಿಶೇಷವಾಗಿ ಕ್ರಿಕೆಟ್ ಪಂದ್ಯಾಟದ ವೇಳೆ ಚೆಂಡನ್ನು ಹಿಡಿಯುವ ಅಥವಾ ತಡೆಯುವಾಗಟಗಾರರು ಪರಸ್ಪರ ಡಿಕ್ಕಿ ಹೊಡೆದು ಗಾಯಗೊಂಡ ಹಲವು ನಿದರ್ಶನಗಳಿವೆ. ಅಂತಹದೊಂದು ಅವಘಡದಿಂದ ಆಟಗಾರರಿಬ್ಬರು ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್​ ಲೀಗ್​ನ 14ನೇ ಪಂದ್ಯದಲ್ಲಿ ಸಿಡ್ನಿ ಥಂಡರ್ ಹಾಗೂ ಮೆಲ್ಬೋರ್ನ್​ ಸ್ಟಾರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೆಲ್ಬೋರ್ನ್​ ಸ್ಟಾರ್ಸ್ ಪರ ಕಣಕ್ಕಿಳಿದಿದ್ದ ಪಾಕ್ ವೇಗಿ ಹ್ಯಾರಿಸ್ ರೌಫ್ 20ನೇ ಓವರ್ ಎಸೆದಿದ್ದರು.

ಈ ಓವರ್​ನ ಮೂರನೇ ಎಸೆತವನ್ನು ರೀಸ್ ಟೋಪ್ಲಿ ಆಫ್ ಸೈಡ್​ನತ್ತ ಬಾರಿಸಿದ್ದಾರೆ. ಅತ್ತ ಚೆಂಡು ಗಾಳಿಯಲ್ಲಿದ್ದರಿಂದ ಹ್ಯಾರಿಸ್ ರೌಫ್ ಕ್ಯಾಚ್ ಹಿಡಿಯಲು ಓಡಿದ್ದಾರೆ. ಅತ್ತ ಕಡೆಯಿಂದ ಹಿಲ್ಟನ್ ಕಾರ್ಟ್‌ರೈಟ್ ಕೂಡ ಕ್ಯಾಚ್ ಹಿಡಿಯಲು ಓಡಿ ಬಂದಿದ್ದಾರೆ. ಇನ್ನೇನು ಇಬ್ಬರು ಆಟಗಾರರು ಡಿಕ್ಕಿಯಾಗಲಿದ್ದಾರೆ ಅನ್ನುವಷ್ಟರಲ್ಲಿ ರೌಫ್​ನ ಕಾರ್ಟ್​ರೈಟ್ ಗಮನಿಸಿದ್ದಾರೆ. ಕ್ಷಣಾರ್ಧದಲ್ಲಿ ಬದಿಗೆ ಸರಿಯುವ ಮೂಲಕ ಹಿಲ್ಟನ್ ಕಾರ್ಟ್‌ರೈಟ್ ಡಿಕ್ಕಿಯಾಗುವುದನ್ನು ತಪ್ಪಿಸಿಕೊಂಡಿದ್ದಾರೆ.

ಇದೀಗ ಕೂದಲೆಳೆಯ ಅಂತರದಲ್ಲಿ ಅವಘಡದಿಂದ ಪಾರಾದ ಹಿಲ್ಟನ್ ಕಾರ್ಟ್‌ರೈಟ್ ಮತ್ತು ಹ್ಯಾರಿಸ್ ರೌಫ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಡ್ನಿ ಥಂಡರ್ ತಂಡವು 20 ಓವರ್​ಗಳಲ್ಲಿ 128 ರನ್ ಕಲೆಹಾಕಿದ್ದರು. ಈ ಗುರಿಯನ್ನು ಮೆಲ್ಬೋರ್ನ್​ ಸ್ಟಾರ್ಸ್ ತಂಡವು 14 ಓವರ್​ಗಳಲ್ಲಿ ಚೇಸ್ ಮಾಡಿ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.