ಬೆಂಗಳೂರಿನಲ್ಲಿ ಶರವೇಗ ಕಾಮಗಾರಿಗಾಗಿ ರ್‍ಯಾಪಿಡ್ ರೋಡ್ಸ್ ನಿರ್ಮಾಣಕ್ಕೆ ಮುಂದಾದ ಬಿಬಿಎಂಪಿ
ವೈಟ್ ಟಾಪಿಂಗ್ ನಿರ್ಮಾಣ ಮಾಡಲು ಹೆಚ್ಚು ಸಮಯ ಬೇಕು. ಅಲ್ಲದೆ ಟ್ರಾಫಿಕ್ ಜಾಮ್ ಸಮಸ್ಯೆ ಕೂಡ ಎದುರಾಗುತ್ತೆ. ಹೀಗಾಗಿ ಬಿಬಿಎಂಪಿ ರ್‍ಯಾಪಿಡ್ ರೋಡ್ಸ್ ನಿರ್ಮಾಣಕ್ಕೆ ಮುಂದಾಗಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ವೈಟ್ ಟಾಪಿಂಗ್, ಬ್ಲಾಕ್ ಟಾಪಿಂಗ್ ರಸ್ತೆಗಳಿಗೆ ಬ್ರೇಕ್ ಹಾಕಿ ರ್‍ಯಾಪಿಡ್ ರೋಡ್ಸ್ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿದೆ. ಮನೆಗಳಲ್ಲಿ ಟೈಲ್ಸ್ ಹಾಕುವ ರೀತಿ, ಸಿದ್ಧಪಡಿಸಿರುವ ಸಿಮೆಂಟ್ ಬ್ಲಾಕ್ಗಳನ್ನ ಹಾಕಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ವೈಟ್ ಟಾಪಿಂಗ್ ನಿರ್ಮಾಣ ಮಾಡಲು ಹೆಚ್ಚು ಸಮಯ ಬೇಕು. ಅಲ್ಲದೆ ಟ್ರಾಫಿಕ್ ಜಾಮ್ ಸಮಸ್ಯೆ ಕೂಡ ಎದುರಾಗುತ್ತೆ. ಹೀಗಾಗಿ ಬೇರೆ ಕಡೆ 5 ಅಡಿಗೆ 20 ಅಡಿ ಅಗಲದ ಸಿಮೆಂಟ್ ಟೈಲ್ಸ್ ಗಳನ್ನ ತಯಾರಿಸಿ ಅದನ್ನು ನಗರದ ರಸ್ತೆಗಳಿಗೆ ಜೋಡಿಸಿ ರ್‍ಯಾಪಿಡ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಸದ್ಯ ಓಲ್ಡ್ ಮದ್ರಾಸ್ ರಸ್ತೆಯಲ್ಲಿ ಪೈಲಟ್ ಪ್ರಾಜೆಕ್ಟ್ ಆರಂಭವಾಗಿದೆ.
Published on: Nov 22, 2022 03:15 PM