[lazy-load-videos-and-sticky-control id=”D2qBb5faDOc”]
ಬೆಂಗಳೂರು: ನಗರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈಗ ವಿಧಿಸಿರುವ ಲಾಕ್ಡೌನ್ನನ್ನ ವಿಸ್ತರಿಸಲು ಬಿಬಿಎಂಪಿ ಅಧಿಕಾರಿಗಳು ಮನವಿ ಮಾಡಿದ್ದಾರೆ. ಬೆಂಗಳೂರನ್ನು ಲಾಕ್ಡೌನ್ ಮಾಡುದ್ರೂ ನಿನ್ನೆ 2 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್ಗಳು ಪತ್ತೆಯಾಗಿದ್ದವು. ಹೀಗಾಗಿ ಕೊರೊನಾ ಕಟ್ಟಿಹಾಕಲು 1 ವಾರ ಸಾಲದು, 15 ದಿನ ಲಾಕ್ ಡೌನ್ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಅಧಿಕಾರಿಗಳು ಮನವಿ ಮಾಡಿದ್ದಾರೆ.
15 ದಿನ ಲಾಕ್ಡೌನ್ ಮಾಡುವಂತೆ ಮನವಿ ಮಾಡ್ತಿರೋದ್ಯಾಕೆ:
15ದಿನ ಲಾಕ್ಡೌನ್ನಿಂದ ಬೆಂಗಳೂರಿನಲ್ಲಿ ಸೋಂಕು ತಡೆಯಬಹುದು ಎಂದು ಬಿಬಿಎಂಪಿ ಅಭಿಪ್ರಾಯಪಟ್ಟಿದೆ. ಸೋಂಕಿತ ವ್ಯಕ್ತಿ 12 ದಿನದಲ್ಲಿ ಗುಣಮುಖರಾಗುತ್ತಿರೋ ಹಿನ್ನೆಲೆಯಲ್ಲಿ ಸೋಂಕಿತರು 15 ದಿನ ಮನೆಯಿಂದ ಹೊರಬಾರದಂತೆ ತಡೆಯಬೇಕು.
ಲಾಕ್ಡೌನ್ನಿಂದ ಸೋಂಕಿತರ ಸಾರ್ವಜನಿಕ ಓಡಾಟ ನಿರ್ಬಂಧಿಸಲಾಗುತ್ತೆ. ಇದರಿಂದ ಸೋಂಕಿತರು ಅನಿವಾರ್ಯವಾಗಿ ಮನೆಯಲ್ಲೇ ಇರಬೇಕಾಗುತ್ತದೆ. ಅಲ್ಲದೆ BBMP ಅ್ಯಂಟಿಜನ್ ಟೆಸ್ಟ್ ಮೂಲಕ ಕೊರೊನಾ ಪರೀಕ್ಷೆ ನಡೆಸುತ್ತಿದೆ. ಕಂಟೈನ್ಮೆಂಟ್ ಝೋನ್ನಲ್ಲಿ ಈ ಟೆಸ್ಟ್ ಮಾಡಲಾಗುತ್ತಿದ್ದು, BBMP ವ್ಯಾಪ್ತಿಯಲ್ಲಿ ಈ ಟೆಸ್ಟ್ ಮುಗಿಸಲು ಕನಿಷ್ಟ 15 ದಿನ ಬೇಕಾಗುತ್ತದೆ. ಹೀಗಾಗಿ 15 ದಿನ ಲಾಕ್ಡೌನ್ ಮಾಡುವಂತೆ ಸರ್ಕಾರಕ್ಕೆ BBMP ಮನವಿ ಮಾಡಿದೆ.
Published On - 9:12 am, Fri, 17 July 20