ತಿರುಪತಿ: ತಿರುಮಲ ನಡಿಗೆಮಾರ್ಗದಲ್ಲಿ ಮತ್ತೆ ಚಿರತೆ ಮತ್ತು ಕರಡಿ ಸಂಚಾರ!

ತಿರುಪತಿ: ತಿರುಮಲ ನಡಿಗೆಮಾರ್ಗದಲ್ಲಿ ಮತ್ತೆ ಚಿರತೆ ಮತ್ತು ಕರಡಿ ಸಂಚಾರ!

TV9 Web
| Updated By: ಸಾಧು ಶ್ರೀನಾಥ್​

Updated on:Mar 30, 2024 | 1:57 PM

ತಿರುಮಲ ನಡಿಗೆಮಾರ್ಗದಲ್ಲಿ ಮತ್ತೆ ಚಿರತೆ ಮತ್ತು ಕರಡಿ ಸಂಚಾರ ಮಾಡಿವೆ. ಭಕ್ತರಿಗೆ ಯಾವುದೇ ಅಪಾಯವಾಗದಂತೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ವಾರದ ಹಿಂದೆ ಎನ್‌ಎಸ್‌ ದೇವಸ್ಥಾನದಲ್ಲಿ ಕರಡಿ ಚಲನವಲನವನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಟ್ರ್ಯಾಪ್‌ ಕ್ಯಾಮೆರಾ ಮೂಲಕವೂ ಚಿರತೆಯ ಚಲನವಲನವನ್ನು ಪತ್ತೆ ಹಚ್ಚಿದ್ದರು.

ತಿರುಪತಿ ವೆಂಕಟರಮಣಸ್ವಾಮಿ ಸನ್ನಿಧಾನದಲ್ಲಿ (TTD) ತಿರುಮಲದ (Tirumala) ನಡಿಗೆ ಮಾರ್ಗದಲ್ಲಿ ವನ್ಯಜೀವಿಗಳು ಮತ್ತೆ ಕಾಣಿಸಿಕೊಂಡಿವೆ. ಮೆಟ್ಟಿಲು ದಾರಿಯಲ್ಲಿ ಕಳೆದ ವರ್ಷ ಕೌಶಿಕ್ ಮತ್ತು ಲಕ್ಷಿತ್ ಮೇಲೆ ದಾಳಿ ನಡೆದ ಪ್ರದೇಶದಲ್ಲಿಯೇ ಈಗ ಮತ್ತೆ ಕಾಡುಪ್ರಾಣಿಗಳು ಓಡಾಡುತ್ತಿವೆ. ಇತ್ತೀಚೆಗೆ ಬುಧವಾರ ರಾತ್ರಿ 7ನೇ ಮೈಲಿಯಲ್ಲಿ ಚಿರತೆ ಹಾಗೂ ಕರಡಿಯ (Bear And Leopard ) ದೃಶ್ಯಗಳು ಟ್ರ್ಯಾಪ್ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಮೇಲಾಗಿ ಅಲ್ಲಿ ಕರಡಿ ಓಡಾಡುತ್ತಿದೆ ಎಂದು ಅರಣ್ಯ ಇಲಾಖೆಯ ಸಿಬ್ಬಂದಿಯೂ ಹೇಳುತ್ತಾರೆ. ಚಿರತೆಯ ಚಲನವಲನ ಕಂಡು ಅರಣ್ಯ ಇಲಾಖೆ ಹಾಗೂ ಟಿಟಿಡಿ ಅಧಿಕಾರಿಗಳು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಭಕ್ತರಿಗೆ ಯಾವುದೇ ಅಪಾಯವಾಗದಂತೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ವಾರದ ಹಿಂದೆ ಎನ್‌ಎಸ್‌ ದೇವಸ್ಥಾನದಲ್ಲಿ ಕರಡಿ ಚಲನವಲನವನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಟ್ರ್ಯಾಪ್‌ ಕ್ಯಾಮೆರಾ ಮೂಲಕವೂ ಚಿರತೆಯ ಚಲನವಲನವನ್ನು ಪತ್ತೆ ಹಚ್ಚಿದ್ದರು. ಅರಣ್ಯ ಇಲಾಖೆಯು ಅಲಿಪಿರಿ ನಡಿಗೆ ಮಾರ್ಗ ಹಾಗೂ ಶ್ರೀವಾರಿ ಮೆಟ್ಟಿಲುಗಳಲ್ಲಿ ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಿ ಕಾಡುಪ್ರಾಣಿಗಳ ಚಲನವಲನದ ಮೇಲೆ ನಿಗಾ ಇಡುತ್ತಿದೆ. ಅದರ ಚಲನವಲನದ ಆಧಾರದ ಮೇಲೆ ಭದ್ರತಾ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 30, 2024 01:56 PM