ಚಿಕ್ಕಮಗಳೂರು: ಪಶ್ಚಿಮ ಘಟ್ಟಗಳ ಸಾಲಿನಿಂದ ಇಳೆಗೆ ಇಳಿದ ಮಳೆಗೆ ಕೋಡಿ ಬಿದ್ದ ಮದಗದಕೆರೆ ಸೊಬಗು ನೋಡಿ!

| Updated By: ಸಾಧು ಶ್ರೀನಾಥ್​

Updated on: Oct 05, 2023 | 8:23 PM

ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಸುರಿದ ಮಳೆಗೆ ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆ ಭಾಗದ ಜೀವನಾಡಿಯಾಗಿರುವ ಮದಗದಕೆರೆ. ಕೋಡಿ ಬಿದ್ದಿದೆ. 2500 ಎಕರೆ ವಿಸ್ತೀರ್ಣದಲ್ಲಿರುವ ಬೃಹತ್ ಮದಗದಕೆರೆಗೆ ಗ್ರಾಮಸ್ಥರು ಬಾಗಿನ ಅರ್ಪಿಸಿ ಸಂಭ್ರಮಿಸಿದ್ದಾರೆ. ಲಕ್ಷಾಂತರ ರೈತರ ಆಧಾರವಾಗಿರುವ ಮದಗದಕೆರೆ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪವಿದೆ.

ಪಶ್ಚಿಮ ಘಟ್ಟಗಳ ಸಾಲಿನಲ್ಲಿ (Western Ghats) ಸುರಿದ ಮಳೆಗೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಬಯಲುಸೀಮೆ ಭಾಗದ ಜೀವನಾಡಿಯಾಗಿರುವ ಮದಗದಕೆರೆ. ಕೋಡಿ ಬಿದ್ದಿದೆ. 2500 ಎಕರೆ ವಿಸ್ತೀರ್ಣದಲ್ಲಿರುವ ಬೃಹತ್ ಮದಗದಕೆರೆಗೆ ಗ್ರಾಮಸ್ಥರು ಬಾಗಿನ ಅರ್ಪಿಸಿ ಸಂಭ್ರಮಿಸಿದ್ದಾರೆ. ಲಕ್ಷಾಂತರ ರೈತರ ಆಧಾರವಾಗಿರುವ ಮದಗದಕೆರೆ (Madagadakere Lake) ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪವಿದೆ. ಈ ಮಧ್ಯೆ ಕಡೂರು (Kadur) ತಾಲೂಕು ಬರ ಪೀಡಿತ ಎಂದು ಘೋಷಣೆಯಾಗಿದೆ. ಎರಡು ತಿಂಗಳ ಹಿಂದೆ ಮದಗದಕೆರೆ ಸಂಪೂರ್ಣ ಖಾಲಿಯಾಗಿತ್ತು. ಒಮ್ಮೆ ಕೆರೆ ಕೋಡಿ ಬಿದ್ರೆ ಒದು ವರ್ಷ ಕಾಲ ಲಕ್ಷಾಂತರ ರೈತರಿಗೆ ಆಸರೆಯಾಗುವ ಕೆರೆ ಇದಾಗಿದೆ. ಮಳೆಗಾಗಿ ಮದಗದಕೆರೆ ಸಮೀಪದ ಕೆಂಚಮ್ಮ ದೇವಿಗೆ ಇತ್ತೀಚೆಗೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಗ್ರಾಮಸ್ಥರ ಜೊತೆ ಸೇರಿ ಕಡೂರು ಶಾಸಕ ಕೆ.ಎಸ್. ಆನಂದ್ ಮಳೆಗಾಗಿ ಪೂಜೆ ಸಲ್ಲಿಸಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ