ಬೆಳಗಾವಿಯಲ್ಲಿ ಶೇಕಡಾ 60 ರಷ್ಟು ಕನ್ನಡ ಭಾಷೆ ನಾಮಫಲಕವಿರದ ಅಂಗಡಿಗಳಿಗೆ ನಗರಸಭೆ ಸಿಬ್ಬಂದಿಯಿಂದ ನೋಟೀಸ್!

|

Updated on: Feb 28, 2024 | 5:47 PM

ಸರ್ಕಾರ ಆದೇಶಕ್ಕೆ ಕ್ಯಾರೇ ಅನ್ನದ ಜನಕ್ಕೆ ಬಿಸಿ ಮುಟ್ಟಿಸಲು ಬೆಳಗಾವಿ ನಗರಸಭೆಯ ಸಿಬ್ಬಂದಿ ಇಂದು ನಗರದ ಖಡೇಬಜಾರ್, ರವಿವಾರ ಪೇಟೆ, ಮತ್ತು ಮಾರ್ಕೆಟ್ ಪ್ರದೇಶಗಳಲ್ಲಿ ಓಡಾಡಿ ವ್ಯಾಪಾರಸ್ಥರಿಗೆ ನೋಟೀಸ್ ಗಳನ್ನು ಜಾರಿಮಾಡಿದರು. ವ್ಯಾಪಾರಸ್ಥರು, ಹೋಟೆಲ್ ಮತ್ತು ರೆಸ್ಟುರಾಂಟ್ ಗಳನ್ನು ನಡೆಸುವವರು ತಮ್ಮ ಗ್ರಾಹಕರೊಂದಿಗೆ ಕನ್ನಡದಲ್ಲೇ ವ್ಯವಹರಿಸಬೇಕೆಂದು ಸಹ ಪಾಲಿಕೆ ಅಧಿಕಾರಿಗಳು ತಾಕೀತು ಮಾಡಿದರು.

ಬೆಳಗಾವಿ: ರಾಜ್ಯದಲ್ಲಿ ಅಂಗಡಿ ಮುಂಗಟ್ಟು ಹೋಟಲ್ ಗಳ ನಾಮಫಲಕಗಳ (name boards) ಶೇ. 60ರಷ್ಟು ಕನ್ನಡ ಭಾಷೆಯಲ್ಲಿರಬೇಕೆಂಬ ಸರ್ಕಾರದ ಆದೇಶ (government order) ಹೊರತಾಗಿಯೂ ಬಹಳಷ್ಟು ಊರುಗಳಲ್ಲಿ, ಸ್ಥಳಗಳಲ್ಲಿ ನಾಮಫಲಕ ಕನ್ನಡೀಕರಿಸುವ ಕಾರ್ಯಕ್ಕೆ ವ್ಯಾಪಾರಸ್ಥರು ಮುಂದಾಗಿಲ್ಲ. ಸರ್ಕಾರ ಆದೇಶಕ್ಕೆ ಕ್ಯಾರೇ ಅನ್ನದ ಜನಕ್ಕೆ ಬಿಸಿ ಮುಟ್ಟಿಸಲು ಬೆಳಗಾವಿ ನಗರಸಭೆಯ (Belagavi city Corporation) ಸಿಬ್ಬಂದಿ ಇಂದು ನಗರದ ಖಡೇಬಜಾರ್, ರವಿವಾರ ಪೇಟೆ, ಮತ್ತು ಮಾರ್ಕೆಟ್ ಪ್ರದೇಶಗಳಲ್ಲಿ ಓಡಾಡಿ ವ್ಯಾಪಾರಸ್ಥರಿಗೆ ನೋಟೀಸ್ ಗಳನ್ನು ಜಾರಿಮಾಡಿದರು. ವ್ಯಾಪಾರಸ್ಥರು, ಹೋಟೆಲ್ ಮತ್ತು ರೆಸ್ಟುರಾಂಟ್ ಗಳನ್ನು ನಡೆಸುವವರು ತಮ್ಮ ಗ್ರಾಹಕರೊಂದಿಗೆ ಕನ್ನಡದಲ್ಲೇ ವ್ಯವಹರಿಸಬೇಕೆಂದು ಸಹ ಪಾಲಿಕೆ ಅಧಿಕಾರಿಗಳು ತಾಕೀತು ಮಾಡಿದರು. ನಗರದ ಮುಖ್ಯರಸ್ತೆಯೊಂದರ ಟೀ ಸ್ಟಾಲ್ ಎದುರುಗಡೆ ನಗರಸಭೆಯ ಅಧಿಕಾರಿಗಳು ಅದರ ಮಾಲೀಕನಿಗೆ ವಿಷಯ ಮನದಟ್ಟು ಮಾಡಿ ಮೋಟೀಸ್ ಜಾರಿಮಾಡುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಬೆಳಗಾವಿಯಲ್ಲಿ ಈ ಕಾರ್ಯಾಚರಣೆಯನ್ನು ಪಾಲಿಕೆ ಸಿಬ್ಬಂದಿ ಶುರುಮಾಡಿರುವುದು ಅಭಿನಂದನೀಯ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ತಮ್ಮ ಬೆಳಗಾವಿ ಸಹೋದ್ಯೋಗಿಗಳಿಂದ ಪ್ರೇರಣೆ ಪಡೆಯುವರೇ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕನ್ನಡ ನಾಮಫಲಕ ಕಡ್ಡಾಯಕ್ಕೆ ಇಂದೇ ಡೆಡ್​ಲೈನ್! ಬಹುತೇಕ ಕಡೆ ಬದಲಾದ ಚಿತ್ರಣ, ಖಡಕ್ ಎಚ್ಚರಿಕೆ ಕೊಟ್ಟ ಕರವೇ