ನಾಲ್ಕು ದಶಕಗಳಿಂದ ರಾಜಕಾರಣದಲ್ಲಿರುವ ನನಗೆ ಯಾರ ಹೆದರಿಕೆಯೂ ಇಲ್ಲ: ಶಿವಾರಂ ಹೆಬ್ಬಾರ್, ಶಾಸಕ

ನಾಲ್ಕು ದಶಕಗಳಿಂದ ರಾಜಕಾರಣದಲ್ಲಿರುವ ನನಗೆ ಯಾರ ಹೆದರಿಕೆಯೂ ಇಲ್ಲ: ಶಿವಾರಂ ಹೆಬ್ಬಾರ್, ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 28, 2024 | 5:37 PM

ಪಕ್ಷದ ಮೇಲಿನ ಅಸಮಾಧಾನಕ್ಕೇನಾದರೂ ಮತದಾನ ಬಹಿಷ್ಕರಿಸಿದಿರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವರಾಂ ಹೆಬ್ಬಾರ್, ಅಸಮಾಧಾನ ಮತ್ತು ಮತದಾನ ಬಹಿಷ್ಕಾರದ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.

ಕಾರವಾರ: ರಾಜ್ಯಸಭೆಗೆ ನಿನ್ನೆ ನಡೆದ ಮತದಾನದಲ್ಲಿ ತಮ್ಮ ಹಕ್ಕು ಚಲಾಯಿಸದೆ ಸಾಕಷ್ಟು ಕುತೂಹಲ ಮೂಡಿಸಿದ್ದ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ (Shivaram Hebbar) ಇಂದು ನಗರದ ಹೊರವಲಯದಲ್ಲಿ ಮಾಧ್ಯಮ ಪ್ರತಿನಿಧಗಳೊಂದಿಗೆ ಮಾತಾಡಿದರು. ನಿನ್ನೆ ಬೆಳಗ್ಗೆ ಅನಾರೋಗ್ಯ (ill health) ಕಾಡುತ್ತಿತ್ತು, ವೈದ್ಯರು ವಿಶ್ರಾಂತಿಯ ಸಲಹೆ ನೀಡಿದ್ದರು, ಹಾಗಾಗಿ ಮತದಾನ (voting) ಮಾಡಲು ಹೋಗಲಿಲ್ಲ ಎಂದು ಹೆಬ್ಬಾರ್ ಹೇಳಿದರು. ಬೆಂಗಳೂರಲ್ಲೇ ಇದ್ದ್ದುಕೊಂಡು ಮತದಾನ ಮಾಡಲು ಹೋಗದಿರುವಂಥ ಪರಿಸ್ಥಿತಿಯೇನೂ ಇರಲಿಲ್ಲ, 4 ದಶಕಗಳಿಂದ ರಾಜಕಾರಣದಲ್ಲಿರುವ ತಾನು ಯಾರದ್ದೋ ಮರ್ಜಿಗೆ ಬಿದ್ದು ಹೆದರುವ ಜಾಯಮಾನದವನಲ್ಲ ಎಂದು ಹೆಬ್ಬಾರ್ ಹೇಳಿದರು. ಪಕ್ಷದ ಮೇಲಿನ ಅಸಮಾಧಾನಕ್ಕೇನಾದರೂ ಮತದಾನ ಬಹಿಷ್ಕರಿಸಿದಿರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವರಾಂ ಹೆಬ್ಬಾರ್, ಅಸಮಾಧಾನ ಮತ್ತು ಮತದಾನ ಬಹಿಷ್ಕಾರದ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Himachal Pradesh Political Crisis: ಯಾರೂ ನನಗೆ ರಾಜೀನಾಮೆ ನೀಡುವಂತೆ ಕೇಳಿಲ್ಲ, ನಾನೂ ಕೊಟ್ಟಿಲ್ಲ: ಹಿಮಾಚಲ ಸಿಎಂ ಸುಖು

Published on: Feb 28, 2024 04:06 PM