Karnataka Assembly Session: ವಿಭಜನೆಯ ನಂತರ ದೇಶ ವಿರೋಧಿ ಚಟುವಟಿಕೆಗಳು ನಡೆಯುವುದನ್ನು ಅಂಬೇಡ್ಕರ್ ಆಗಲೇ ಊಹಿಸಿದ್ದರು: ಬಸನಗೌಡ ಪಾಟೀಲ್ ಯತ್ನಾಳ್

Karnataka Assembly Session: ವಿಭಜನೆಯ ನಂತರ ದೇಶ ವಿರೋಧಿ ಚಟುವಟಿಕೆಗಳು ನಡೆಯುವುದನ್ನು ಅಂಬೇಡ್ಕರ್ ಆಗಲೇ ಊಹಿಸಿದ್ದರು: ಬಸನಗೌಡ ಪಾಟೀಲ್ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 28, 2024 | 5:36 PM

ಅಂಬೇಡ್ಕರ್ಸ್ ಥಾಟ್ಸ್ ಆನ್ ಪಾಕಿಸ್ತಾನ್ ಪುಸ್ತಕದಲ್ಲಿ ಬಾಬಾ ಸಾಹೇಬರು, ಭಾರತದ ವಿಭಜನೆಯನ್ನು ತಮ್ಮ ಆತ್ಮ ಯಾವತ್ತೂ ಒಪ್ಪಲ್ಲ, ಅದು ಅನಿವಾರ್ಯ ಅಂತಾದರೆ ಭಾರತದಲ್ಲಿರುವ ಮುಸಲ್ಮಾನರೆಲ್ಲ ಪಾಕಿಸ್ತಾನಕ್ಕೆ ಕಳಿಸಬೇಕು ಮತ್ತು ಅಲ್ಲಿರುವ ಹಿಂದೂಗಳನ್ನು ಭಾರತಕ್ಕೆ ತರಬೇಕು, ಯಾಕೆಂದರೆ ಭೇರೆ ಧರ್ಮದ ಜನರನ್ನು ಸಹೋದರ ಭಾವನೆಯಯಿಂದ ಮನೋಭಾವ ಮುಸಲ್ಮಾನರಲ್ಲಿಲ್ಲ ಎಂದು ಅಂಬೇಡ್ಕರ್ ಹೇಳಿದ್ದಾರೆ ಅಂತ ಯತ್ನಾಳ್ ತಿಳಿಸಿದರು.

ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಇಂದು ಸದನದೊಳಗೂ ಅಡಳಿತ ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದರು. 1947 ರಲ್ಲಿ ಭಾರತಕ್ಕೆ ಸ್ವಾಂತಂತ್ರ್ಯ ಸಿಕ್ಕಾಗ ಸರದಾರ ವಲ್ಲಭ್ ಭಾಯಿ ಪಟೇಲ್ (Sardar Vallabhbhai Patel) ಮತ್ತು ಡಾ ಬಿಆರ್ ಅಂಬೇಡ್ಕರ್ (Dr BR Ambedkar) ಅವರು ಕಂಡ ಕನಸಿನ ಭಾರತ ಇದಲ್ಲ, ಅಂಬೇಡ್ಕರ್ಸ್ ಥಾಟ್ಸ್ ಆನ್ ಪಾಕಿಸ್ತಾನ್ ಪುಸ್ತಕದಲ್ಲಿ ಬಾಬಾ ಸಾಹೇಬರು, ಭಾರತದ ವಿಭಜನೆಯನ್ನು ತಮ್ಮ ಆತ್ಮ ಯಾವತ್ತೂ ಒಪ್ಪಲ್ಲ, ಅದು ಅನಿವಾರ್ಯ ಅಂತಾದರೆ ಭಾರತದಲ್ಲಿರುವ ಮುಸಲ್ಮಾನರೆಲ್ಲ ಪಾಕಿಸ್ತಾನಕ್ಕೆ ಕಳಿಸಬೇಕು ಮತ್ತು ಅಲ್ಲಿರುವ ಹಿಂದೂಗಳನ್ನು ಭಾರತಕ್ಕೆ ತರಬೇಕು, ಯಾಕೆಂದರೆ ಭೇರೆ ಧರ್ಮದ ಜನರನ್ನು ಸಹೋದರ ಭಾವನೆಯಯಿಂದ ಮನೋಭಾವ ಮುಸಲ್ಮಾನರಲ್ಲಿಲ್ಲ, ಅವರು ಕೇವಲ ತಮ್ಮ ಧರ್ಮ ಮಾತ್ರ ಶ್ರೇಷ್ಠವೆಂದು ಸಾಧಿಸುತ್ತಾರೆ ಅಂತ ಹೇಳಿದ್ದಾರೆ ಎಂದು ಯತ್ನಾಳ್ ಸದನಕ್ಕೆ ತಿಳಿಸಿದರು.

ಭಾರತದಲ್ಲಿ ಈಗ ನಡೆಯುತ್ತಿರುವ ಘಟನೆಗಳ ಬಗ್ಗೆ ಅಂಬೇಡ್ಕರ್ ಆಗಲೇ ಊಹಿಸಿದ್ದರು ಎಂದ ಯತ್ನಾಳ್, ವಿಧಾನ ಸೌಧದಲ್ಲಿ ಪಾಕಿಸ್ತಾನ್ ಪರ ಘೋಷಣೆ ಕೂಗುವ ಮತ್ತು ದೇಶದ ಯಾವುದೇ ಭಾಗದಲ್ಲಿ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವವರು ಮುಸಲ್ಮಾನರಾಗಿರಲಿ, ಹಿಂದೂಗಳಾಗಿರಲಿ ಆಥವಾ ಕ್ರಿಶ್ವಿಯನ್- ಅವರಿಗೆ ಕಠಿಣ ಶಿಕ್ಷೆಯಾಗಲೇ ಬೇಕು ಎಂದು ಯತ್ನಾಳ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Karnataka Assembly Session: ಪಾಕಿಸ್ತಾನ್ ಪರ ಕೂಗುವವರು ವಿಧಾನಸೌಧಕ್ಕೆ ಬರುತ್ತಾರೆಂದರೆ ದೇಶ ಕಾಯುವ ಸೈನಿಕನಿಗೆ ಏನು ಉತ್ತರ ಕೊಡೋದು? ಆರ್ ಅಶೋಕ

Published on: Feb 28, 2024 01:43 PM