Karnataka Assembly Session: ಪಾಕಿಸ್ತಾನ್ ಪರ ಕೂಗುವವರು ವಿಧಾನಸೌಧಕ್ಕೆ ಬರುತ್ತಾರೆಂದರೆ ದೇಶ ಕಾಯುವ ಸೈನಿಕನಿಗೆ ಏನು ಉತ್ತರ ಕೊಡೋದು? ಆರ್ ಅಶೋಕ
Karnataka Assembly Session: ವಿಧಾನ ಸೌಧದಲ್ಲಿ ಅಂಥ ಘೋಷಣೆ ಮೊಳಗಿದರೂ ಸರ್ಕಾರದ ಪ್ರತಿನಿಧಿಗಳು ತಮಗೆ ಗೊತ್ತಿಲ್ಲ ಅನ್ನುತ್ತಾ ಹೊಣೆಗಾರಿಕೆಯಿಂದ ಜಾರಿಕೊಳ್ಳುತ್ತಿದ್ದಾರೆ, ಹಾಗೆ ಕೂಗಿದವರು ಬಜೆಟ್ ಅಧಿವೇಶನ ನಡೆಯುತ್ತಿದ್ದಾಗಲೂ ಸದನದಲ್ಲಿ ಹಾಜರಿದ್ದರು, ಅವರು ಯಾರೆಂದು ಗೊತ್ತಿಲ್ಲ ಅನ್ನುವ ಸರ್ಕಾರ ಕನ್ನಡಿಗರ ಕಿವಿಗೆ ಹೂ ಮುಡಿಸುತ್ತಿದೆ, ವಿಧಾನ ಸೌಧದಲ್ಲೇ ನಮಗೆ ರಕ್ಷಣೆ ಇಲ್ಲವೆಂದ್ರೆ ಹೇಗೆ? ಎಂದು ಅಶೋಕ ಖಾರವಾಗಿ ಪ್ರಶ್ನಿಸಿದರು.
ಬೆಂಗಳೂರು: ವಿಧಾನಸಭಾ ಅಧಿವೇಶನದ ಕಾರ್ಯಕಲಾಪದಲ್ಲಿ (Karnataka Budget Session) ಇಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ (R Ashoka) ವಿಧಾನ ಸೌಧದಲ್ಲಿ ನಿನ್ನೆ ಪಾಕಿಸ್ತಾನ್ ಪರ ಕೂಗಿದ ಘೋಷಣೆಗೆ (pro Pakistan sloganeering) ಸಂಬಂಧಿಸಿದಂತೆ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ವಿಧಾನ ಸೌಧದಲ್ಲಿ ಅಂಥ ಘೋಷಣೆ ಮೊಳಗಿದರೂ ಸರ್ಕಾರದ ಪ್ರತಿನಿಧಿಗಳು ತಮಗೆ ಗೊತ್ತಿಲ್ಲ ಅನ್ನುತ್ತಾ ಹೊಣೆಗಾರಿಕೆಯಿಂದ ಜಾರಿಕೊಳ್ಳುತ್ತಿದ್ದಾರೆ, ಹಾಗೆ ಕೂಗಿದವರು ಬಜೆಟ್ ಅಧಿವೇಶನ ನಡೆಯುತ್ತಿದ್ದಾಗಲೂ ಸದನದಲ್ಲಿ ಹಾಜರಿದ್ದರು, ಅವರು ಯಾರೆಂದು ಗೊತ್ತಿಲ್ಲ ಅನ್ನುವ ಸರ್ಕಾರ ಕನ್ನಡಿಗರ ಕಿವಿಗೆ ಹೂ ಮುಡಿಸುತ್ತಿದೆ, ವಿಧಾನ ಸೌಧದಲ್ಲೇ ನಮಗೆ ರಕ್ಷಣೆ ಇಲ್ಲವೆಂದ್ರೆ ಹೇಗೆ? ಎಂದು ಅಶೋಕ ಖಾರವಾಗಿ ಪ್ರಶ್ನಿಸಿದರು. ಪಾಕಿಸ್ತಾನದ ಪರ ಘೋಷಣೆ ಕೇವಲ ಪಾಕಿಸ್ತಾನಿಯೇ ಕೂಗಬಲ್ಲ, ಭಾರತದ ಅನ್ನ ತಿಂದು ಇಲ್ಲಿಯ ನೀರು ಕುಡಿದವನು ಅದನ್ನು ಮಾಡಲಾರ. ಇಂಥ ದುಷ್ಟರು ಭಯೋತ್ಪಾದರು ವಿಧಾನ ಸೌಧಕ್ಕೆ ಬರುತ್ತಾರೆಂದರೆ ದೇಶವನ್ನು ಕಾಯುವ ನಮ್ಮ ಸೈನಿಕರಿಗೆ ಏನು ಉತ್ತರ ಕೋಟ್ಟೇವು ಎಂದು ಅಶೋಕ ಪ್ರಶ್ನಿಸಿದರು. ಕೂಗಿದ್ದನ್ನು ಸಾಬೀತು ಮಾಡುವ ಪ್ರಶ್ನೆ ಹೇಗೆ ಉದ್ಭವಿಸುತ್ತದೆ? ಮಾಧ್ಯಮದವರು ಸುಳ್ಳು ಹೇಳುತ್ತಾರಾ? ನಾನು ಸುಳ್ಳಾಡುತ್ತಿದ್ದೀನಾ? ಹಾಗಾದರೆ ಮಾಧ್ಯಮದವರನ್ನು ಮತ್ತು ನನ್ನನ್ನು ಜೈಲಿಗೆ ಹಾಕಿ ಎಂದು ಅಶೋಕ ಸರ್ಕಾರಕ್ಕೆ ಸವಾಲೆಸೆದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪಾಕಿಸ್ತಾನ್ ಪರ ಕೂಗಿದ್ದು ದೃಢಪಟ್ಟರೆ ಕೂಗಿದವರ ವಿರುದ್ಧ ಕಠಿಣ ಕ್ರಮ: ಸಿದ್ದರಾಮಯ್ಯ, ಮುಖ್ಯಮಂತ್ರಿ