ಬೆಳಗಾವಿ ಡಿಸಿಸಿ ಬ್ಯಾಂಕ್ ಚುಕ್ಕಾಣಿ ಫೈಟ್​ ತಾರಕಕ್ಕೆ: 50 ಕೋಟಿ ಬೆಟ್ಟಿಂಗ್​ ಎಂದ ಜಾರಕಿಹೊಳಿ

Updated By: ಪ್ರಸನ್ನ ಹೆಗಡೆ

Updated on: Oct 20, 2025 | 11:30 AM

ಬೆಳಗಾವಿ ಡಿಸಿಸಿ ಬ್ಯಾಂಕ್ ಚುಕ್ಕಾಣಿ ವಿಚಾರವಾಗಿ ಲಕ್ಷ್ಮಣ ಸವದಿ ಮತ್ತು ಜಾರಕಿಹೊಳಿ ಬಣದ ತಿಕ್ಕಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಿಸಿ ಬ್ಯಾಂಕ್ ಚುಕ್ಕಾಣಿ ಯಾರು ಹಿಡಿಯುತ್ತಾರೆ ಎಂಬುದಕ್ಕೆ 50 ಕೋಟಿ ರೂ. ಬೆಟ್ಟಿಂಗ್ ಕಟ್ಟಲು ರೆಡಿ ಎಂದು ಲಕ್ಷ್ಮಣ ಸವದಿಗೆ ಬಾಲಚಂದ್ರ ಜಾರಕಿಹೊಳಿ‌ ಸವಾಲು ಹಾಕಿದ್ದರೆ, ಇತ್ತ ಸಚಿವ ಸತೀಶ್ ಜಾರಕಿಹೊಳಿ ಕೂಡ ಸವದಿ ಹೇಳಿಕೆ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಬೆಳಗಾವಿ, ಅಕ್ಟೋಬರ್​ 20: ಬೆಳಗಾವಿ ಡಿಸಿಸಿ ಬ್ಯಾಂಕ್ (DCC Bank) ಚುಕ್ಕಾಣಿ ವಿಚಾರವಾಗಿ ಲಕ್ಷ್ಮಣ ಸವದಿ ಮತ್ತು ಜಾರಕಿಹೊಳಿ ಬಣದ ತಿಕ್ಕಾಟ ತಾರಕಕ್ಕೇರಿದೆ. ನಾವೇ ಅಧಿಕಾರ ಹಿಡಿಯುತ್ತೇವೆ ಎಂದಿದ್ದ ಶಾಸಕ ಸವದಿ ಹೇಳಿಕೆಗೆ ಬಾಲಚಂದ್ರ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ. ಡಿಸಿಸಿ ಬ್ಯಾಂಕ್ ಚುಕ್ಕಾಣಿ ಯಾರು ಹಿಡಿಯುತ್ತಾರೆ ಎಂಬುದಕ್ಕೆ ₹50 ಕೋಟಿ ಬೆಟ್ಟಿಂಗ್ ಕಟ್ಟಲು ರೆಡಿ ಎಂದು ಬಾಲಚಂದ್ರ ಜಾರಕಿಹೊಳಿ‌ ಸವಾಲು ಹಾಕಿದ್ದಾರೆ. ಸವದಿ ಚುಕ್ಕಾಣಿ ಹಿಡಿದ್ರೆ ಆಸ್ತಿ ಮಾರಿಯಾದ್ರೂ ₹50 ಕೋಟಿ ಕೊಡ್ತೀನಿ. ಅವರಿಂದ ಸಾಧ್ಯವಾಗದಿದ್ರೆ ₹50 ಕೋಟಿ ಕೊಡಲು ತಯಾರಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. ಮತ್ತೊಂದು ಕಡೆ ಸವದಿ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದ್ದು, ಅಧ್ಯಕ್ಷ ನಮ್ಮವರೇ ಆಗ್ತಾರೆ ಅಂತಾ ಹೇಳಿ‌ ಬೀಜ ಬಿತ್ತಿದ್ದಾರೆ. ಅದೆಲ್ಲಾ ವರ್ಕೌಟ್ ಆಗಲ್ಲ ಎಂದು ಸವದಿ ಹೇಳಿಕೆಗೆ ಸತೀಶ್ ತಿರುಗೇಟು ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.