‘ಏಕವಚನದಲ್ಲಿ ಮಾತನಾಡಬೇಡ’; ಮೊದಲ ದಿನವೇ ರಘು ಹಾಗೂ ಅಶ್ವಿನಿ ಮಧ್ಯೆ ಫೈಟ್
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಮೂರನೇ ವಾರವೇ ಫಿನಾಲೆ ನಡೆಯಿತು. ಈ ಫಿನಾಲೆಯಲ್ಲಿ ಮೂವರು ದೊಡ್ಮನೆ ಒಳಗೆ ಬಂದಿರೋದನ್ನು ಕಾಣಬಹುದು. ಈ ವೇಳೆ ರಘು ಅವರು ಕೂಡ ಇದರಲ್ಲಿ ಒಬ್ಬರು. ಅವರು ಮೊದಲ ದಿನವೇ ಸಂಚಲನ ಸೃಷ್ಟಿಸೋ ಸೂಚನೆ ಕೊಟ್ಟಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮೂವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಇದರಲ್ಲಿ ರಘು ಅವರು ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಅವರು ಜಿಮ್ ಕೋಚ್ ಆಗಿದ್ದಾರೆ. ಹೀಗಾಗಿ, ಕಟ್ಟುಮಸ್ತಾದ ದೇಹ ಹೊಂದಿದ್ದಾರೆ. ಈಗ ರಘು ಅವರು ಬಿಗ್ ಬಾಸ್ನಲ್ಲಿ ಮೊದಲ ದಿನವೇ ಜಗಳ ಆರಂಭಿಸಿದ್ದಾರೆ. ಅಶ್ವಿನಿ ವಿರುದ್ಧ ಅವರು ಸಿಡಿದೆದ್ದಿದ್ದು, ಇದು ಸಾಕಷ್ಟು ಚರ್ಚೆಗೆ ಕಾರಣ ಆಗಿದೆ. ರಘು ಹಾಗೂ ಅಶ್ವಿನಿ ಮಧ್ಯೆ ಮೊದಲ ದಿನವೇ ಫೈಟ್ ನಡೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
