ಬೆಳಗಾವಿ: ಸತೀಶ್ ಜಾರಕಿಹೊಳಿ ಪರೇಡ್ ವೀಕ್ಷಣೆಗೆ ತೆರಳುವ ಜೀಪ್ನಲ್ಲಿ ಡೀಸೆಲ್ ಸೋರಿಕೆ, ತಪ್ಪಿದ ಅನಾಹುತ
ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವದ ಸಂದರ್ಭ ಸಚಿವ ಸತೀಶ್ ಜಾರಕಿಹೊಳಿ ಜೀಪ್‌ನಿಂದ ಡೀಸೆಲ್ ಸೋರಿಕೆಯಾಗಿದ್ದು, ಪೊಲೀಸರ ಸಮಯ ಪ್ರಜ್ಞೆಯಿಂದ ಅಪಾಯವೊಂದು ಸ್ವಲ್ಪದರಲ್ಲೇ ತಪ್ಪಿದೆ. ರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದ ಬಳಿಕ ಪರೇಡ್ ವೀಕ್ಷಣೆಗೆ ತೆರಳಲು ಸಚಿವರು ಸಿದ್ಧರಾಗಿದ್ದಾಗ ಈ ಘಟನೆ ನಡೆದಿದೆ. ವಿಡಿಯೋ ಇಲ್ಲಿದೆ.
ಬೆಳಗಾವಿ, ನವೆಂಬರ್ 1: ಕನ್ನಡ ರಾಜ್ಯೋತ್ಸವದ ಸಂಭ್ರಮದ ಸಂದರ್ಭದಲ್ಲಿ ಕುಂದಾನಗರಿ ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಭಾರಿ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದೆ. ರಾಜ್ಯೋತ್ಸವ ಪರೇಡ್ ವೀಕ್ಷಣೆಗೆ ತೆರಳುವ ಸಚಿವ ಸತೀಶ್ ಅವರ ಜೀಪ್‌ನಿಂದ ಅಕಸ್ಮಾತ್ ಡೀಸೆಲ್ ಸೋರಿಕೆಯಾಗಿದೆ. ಧ್ವಜಾರೋಹಣ ಕಾರ್ಯಕ್ರಮದ ಬಳಿಕ ಪರೇಡ್ ವೀಕ್ಷಣೆಗೆ ತೆರಳಲು ಸಚಿವರು ಸಿದ್ಧರಾಗಿದ್ದ ವೇಳೆ ಜೀಪ್ ಕೆಳಭಾಗದಲ್ಲಿ ಡೀಸೆಲ್ ಸೋರಿಕೆಯಾದ್ದು ಗಮನಕ್ಕೆ ಬಂದಿದೆ. ಬೆಂಕಿ ಹೊತ್ತಿಕೊಳ್ಳದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಫೈರ್ ಕಂಟ್ರೋಲ್ ಗ್ಯಾಸ್ ಸಿಂಪಡಣೆ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಬಳಿಕ ಪೊಲೀಸರು ಜೀಪ್‌ನ್ನು ಮೈದಾನದಿಂದ ಹೊರತೆಗೆದುಕೊಂಡು ಹೋದರು.
