Savadatti Yellamma temple: ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಹುಂಡಿಯಲ್ಲಿ ಸೌದಿ ಅರೇಬಿಯಾದ ನೋಟು ಪತ್ತೆ!

ಸಾಧು ಶ್ರೀನಾಥ್​

Updated on: Jan 07, 2022 | 12:20 PM

ಬೆಳಗಾವಿ: ಸವದತ್ತಿ ಪಟ್ಟಣದ ಹೊರವಲಯದಲ್ಲಿರುವ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಹುಂಡಿಯಲ್ಲಿ 1.18 ಕೋಟಿ ಹಣ, ₹17 ಲಕ್ಷ ಮೌಲ್ಯದ ಚಿನ್ನ, ₹2 ಲಕ್ಷ ಮೌಲ್ಯದ ಬೆಳ್ಳಿ ಸಂಗ್ರಹ; ಹುಂಡಿಯಲ್ಲಿ ಬ್ಯಾನ್ ಆಗಿರುವ ನೋಟ್‌ಗಳು, ವಿದೇಶಿ ಕರೆನ್ಸಿ ಕೂಡ ಪತ್ತೆಯಾಗಿವೆ.

ಬೆಳಗಾವಿ: ಸವದತ್ತಿ ಪಟ್ಟಣದ ಹೊರವಲಯದಲ್ಲಿರುವ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಹುಂಡಿಯಲ್ಲಿ 1.18 ಕೋಟಿ ಹಣ, ₹17 ಲಕ್ಷ ಮೌಲ್ಯದ ಚಿನ್ನ, ₹2 ಲಕ್ಷ ಮೌಲ್ಯದ ಬೆಳ್ಳಿ ಸಂಗ್ರಹ; ಹುಂಡಿಯಲ್ಲಿ ಬ್ಯಾನ್ ಆಗಿರುವ ನೋಟ್‌ಗಳು, ವಿದೇಶಿ ಕರೆನ್ಸಿ ಕೂಡ ಪತ್ತೆಯಾಗಿವೆ. ಬೆಳಗಾವಿ ಜಿಲ್ಲೆ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಹುಂಡಿ ಎಣಿಕೆ. ಈ ಬಾರಿಯೂ ಹುಂಡಿ ಎಣಿಕೆಯಲ್ಲಿ ದಾಖಲೆ ಮೊತ್ತದ ಹಣ ಸಂಗ್ರಹ. ಯಲ್ಲಮ್ಮನ ಹುಂಡಿಯಲ್ಲಿ ಸೌದಿ ಅರೇಬಿಯಾದ ಒಂದು ಕರೆನ್ಸಿ ನೋಟು ಪತ್ತೆ. 1.18ಕೋಟಿ ರೂ., 17ಲಕ್ಷ ಮೌಲ್ಯದ ಚಿನ್ನ, 2ಲಕ್ಷ ಮೌಲ್ಯದ ಬೆಳ್ಳಿ ಸಂಗ್ರಹ. ವೀಕೆಂಡ್​ ಕರ್ಫ್ಯೂ ಹಿನ್ನೆಲೆ ಇಂದಿನಿಂದ ಯಲ್ಲಮ್ಮ ದೇವಿ ದರ್ಶನಕ್ಕೆ ನಿಷೇಧ.

ಬೆಳಗಾವಿಯ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಹುಂಡಿ ಎಣಿಕೆ. ಈ ಬಾರಿಯೂ ಹುಂಡಿ ಎಣಿಕೆಯಲ್ಲಿ ದಾಖಲೆ ಮೊತ್ತದ ಹಣ ಸಂಗ್ರಹ. ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಹೊರ ವಲಯದಲ್ಲಿರುವ ಯಲ್ಲಮ್ಮನ ಗುಡ್ಡ. ಯಲ್ಲಮ್ಮನ ಹುಂಡಿಯಲ್ಲಿ ಸೌದಿ ಅರೇಬಿಯಾದ ಒಂದು ಕರೆನ್ಸಿ ನೋಟು ಸೇರಿ. ಬ್ಯಾನ್ ಆದ ಐದನೂರು, ಸಾವಿರ ಮುಖ ಬೆಲೆಯ ನೋಟು ಹುಂಡಿಗೆ ಹಾಕಿರುವ ಭಕ್ತರು. ನವೆಂಬರ್ 2021ರಲ್ಲಿ 1.18ಕೋಟಿ ಹಣ, 17ಲಕ್ಷ ಮೌಲ್ಯದ ಚಿನ್ನ, 2ಲಕ್ಷ ಮೌಲ್ಯದ ಬೆಳ್ಳಿ ಸಂಗ್ರಹಗೊಂಡಿದೆ. ಇಂದಿನಿಂದ ಭಕ್ತರಿಗೆ ಯಲ್ಲಮ್ಮ ದೇವಿ ದರ್ಶನಕ್ಕೆ ನಿಷೇಧವಿದೆ.

Published on: Jan 07, 2022 12:19 PM
Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು