ಬೆಳಗಾವಿ: ಹುಲಿ ಓಡಾಟದ ವಿಡಿಯೋ ಎಡಿಟ್ ಮಾಡಿ ವೈರಲ್; ಯಾವುದೇ ಆತಂಕವಿಲ್ಲ ಎಂದ ACF

|

Updated on: Aug 15, 2024 | 3:18 PM

ಬೆಳಗಾವಿಯ ಕೊಂಡಸಕೊಪ್ಪ ಬಳಿ ಹುಲಿ ಪತ್ತೆ ಹಿನ್ನಲೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೂ ಯಾವುದೇ ಹುಲಿ ಓಡಾಟದ ಯಾವುದೇ ಕುರುಹುಗಳು‌ ಪತ್ತೆಯಾಗಿಲ್ಲ. ಈ ಕುರಿತು ಮಾತನಾಡಿದ ಬೆಳಗಾವಿ ಎಸಿಎಫ್ ನಾಗರಾಜ, ‘ಹುಲಿ ಬಂದಿಲ್ಲ ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ ಎಂದಿದ್ದಾರೆ.

ಬೆಳಗಾವಿ, ಆ.15: ಬೆಳಗಾವಿಯ ಕೊಂಡಸಕೊಪ್ಪ ಬಳಿ ಹುಲಿ ಬಂದಿದೆ ಎಂಬ ಸುಳ್ಳು ವದಂತಿ ಹಬ್ಬಿದ್ದು, ಹುಲಿ ಓಡಾಟದ ವಿಡಿಯೋ ಎಡಿಟ್ ಮಾಡಿ ವೈರಲ್ ಮಾಡಲಾಗಿದೆ. ಇನ್ನು ಹುಲಿ ಪತ್ತೆ ಹಿನ್ನಲೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೂ ಯಾವುದೇ ಹುಲಿ ಓಡಾಟದ ಯಾವುದೇ ಕುರುಹುಗಳು‌ ಪತ್ತೆಯಾಗಿಲ್ಲ. ಈ ಕುರಿತು ಮಾತನಾಡಿದ ಬೆಳಗಾವಿ ಎಸಿಎಫ್ ನಾಗರಾಜ, ‘ಹುಲಿ ಬಂದಿಲ್ಲ ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ. ವೈರಲ್ ವಿಡಿಯೋದಲ್ಲಿ ಮೇಲ್ಭಾಗ ಹುಲಿಯದ್ದು, ಕಾಲು ಚಿರತೆಯದ್ದು ಇದೆ. ಎಡಿಟ್ ಮಾಡಿ ವೈರಲ್ ಮಾಡ್ತಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ.
ಸುತ್ತ ಮುತ್ತಲಿನ ಗ್ರಾಮಸ್ಥರು ಆತಂಕ ಪಡಬೇಕಿಲ್ಲ. ನಿನ್ನೆ ಒಂದು ಕಾಡು ಬೆಕ್ಕು ಕಾಣಿಸಿಕೊಂಡಿದ್ದು, ಅದನ್ನ ಸೆರೆ ಹಿಡಿದು ಕಾಡಿಗೆ ಬಿಡುತ್ತೇವೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 15, 2024 03:18 PM