ಕಾರ್ಯಕ್ರಮದಲ್ಲಿ ದೈವ ಆವಾಹನೆ ರೀತಿ ನರ್ತನ; ವಿಡಿಯೋ ವೈರಲ್, ಮಹಿಳೆಯರ ನಡೆಗೆ ದೈವಾರಾಧಕರಿಂದ ಕಿಡಿ

ತುಳು ನಾಡಿನಲ್ಲಿ ದೈವಕ್ಕೆ ತನ್ನದೇ ಆದ ಪ್ರಾಶಸ್ತ್ಯವಿದೆ. ಅದರಂತೆ ಇದೀಗ ಮಂಗಳೂರು (Mangalore) ನಗರದ ಯೆಯ್ಯಾಡಿ‌ ಎಂಬಲ್ಲಿ ನಡೆದ ಆಟಿದ ಕೂಟ ಎಂಬ ಕಾರ್ಯಕ್ರಮದಲ್ಲಿ ತಾಸೆ, ವಾದ್ಯದ ಸದ್ದಿಗೆ ದೈವ ಆವಾಹನೆ ರೀತಿ ಇಬ್ಬರು ಮಹಿಳೆಯರು ಕುಣಿದಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ದೈವ ಆವಾಹನೆ ರೀತಿ ನರ್ತನ; ವಿಡಿಯೋ ವೈರಲ್, ಮಹಿಳೆಯರ ನಡೆಗೆ ದೈವಾರಾಧಕರಿಂದ ಕಿಡಿ
|

Updated on: Aug 14, 2024 | 4:25 PM

ದಕ್ಷಿಣ ಕನ್ನಡ, ಆ.14: ಕಾರ್ಯಕ್ರಮವೊಂದರಲ್ಲಿ ದೈವ ಆವಾಹನೆ ರೀತಿ ಮಹಿಳೆ ನೃತ್ಯ ಮಾಡಿದ ಘಟನೆ ಮಂಗಳೂರು (Mangalore) ನಗರದ ಯೆಯ್ಯಾಡಿ‌ ಎಂಬಲ್ಲಿ ನಡೆದಿದೆ. ಮಹಿಳೆಯರಿಬ್ಬರ ನರ್ತನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮಹಿಳೆಯರ ನಡೆಗೆ ದೈವಾರಾಧಕರು ಕಿಡಿಕಾರಿದ್ದಾರೆ. ಖಾಸಗಿ ಸಭಾಂಗಣವೊಂದರಲ್ಲಿ ನಡೆದ ಆಟಿದ ಕೂಟ ಎಂಬ ಕಾರ್ಯಕ್ರಮದಲ್ಲಿ ತಾಸೆ, ವಾದ್ಯದ ಸದ್ದಿಗೆ ದೈವ ಆವಾಹನೆ ರೀತಿ ಇಬ್ಬರು ಮಹಿಳೆಯರು ಕುಣಿದಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೈವ ನರ್ತನಕ್ಕೆ ಅಪಚಾರ ಎಸಗಿದವರು ಕ್ಷಮೆ ಕೋರುವಂತೆ ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us