ಕಲಾವಿದರ ಸಂಘದಲ್ಲಿ ಪೂಜೆ, ಹೋಮ: ಪ್ರಮುಖ ನಟರೇ ಬಂದಿಲ್ಲ ಎಂದಿದ್ದಕೆ ಸುಮಲತಾ ಏನಂದ್ರು?
ಚಿತ್ರರಂಗದ ಒಳಿತಿಗಾಗಿ ಕಲಾವಿದರ ಸಂಘದ ಕಟ್ಟಡದಲ್ಲಿ ಅದ್ದೂರಿಯಾಗಿ ಪೂಜೆ, ಹೋಮ ಮಾಡಲಾಗಿದೆ. ಇದರಲ್ಲಿ ಬಹುತೇಕ ಕಲಾವಿದರು ಭಾಗವಹಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಪ್ರಮುಖ ಕಲಾವಿದರೇ ಗೈರಾಗಿದ್ದಾರೆ. ಈ ಕುರಿತು ನಟಿ ಸುಮಲತಾ ಅಂಬರೀಷ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಹೇಳಿದ್ದೇನು ತಿಳಿಯಲು ಈ ವಿಡಿಯೋ ನೋಡಿ..
ಕನ್ನಡ ಚಿತ್ರರಂಗಕ್ಕೆ ಈಗ ಕಷ್ಟ ಕಾಲ. ನಿರೀಕ್ಷಿತ ಮಟ್ಟದಲ್ಲಿ ಸಿನಿಮಾಗಳು ಗೆಲ್ಲುತ್ತಿಲ್ಲ. ಹಾಗಾಗಿ ಪೂಜೆ, ಹೋಮ ಮಾಡಿಸಲಾಗಿದೆ. ಇಂದು (ಆಗಸ್ಟ್ 14) ಕಲಾವಿದರ ಸಂಘದಲ್ಲಿ ಹೋಮ ನಡೆದಿದೆ. ಇದರಲ್ಲಿ ಸುಮಲತಾ ಅಂಬರೀಷ್ ಭಾಗಿಯಾಗಿದ್ದಾರೆ. ಸ್ಯಾಂಡಲ್ವುಡ್ನ ಒಳಿತಿಗಾಗಿ ಈ ಪೂಜೆ ಮಾಡಲಾಗಿದ್ದರೂ ಕೂಡ ಪ್ರಮುಖ ಸ್ಟಾರ್ ಕಲಾವಿದರು ಬಾರದೇ ಇರುವುದರ ಬಗ್ಗೆ ಸುಮಲತಾ ಮಾತನಾಡಿದ್ದಾರೆ. ‘ಇದು ಸ್ವಲ್ಪ ಬೇಜಾರಿನ ವಿಷಯ. ಅಂಬರೀಷ್ ಅವರ 20 ವರ್ಷದ ಶ್ರಮದಿಂದ ಈ ಕಲಾವಿದರ ಭವನ ಆಗಿದೆ. ಅವರು ಅಷ್ಟು ಕಷ್ಟಪಟ್ಟಿದ್ದರು. ಇದು ರಾಜ್ಕುಮಾರ್ ಅವರ ಕನಸಾಗಿತ್ತು. ಕಲಾವಿದರೆಲ್ಲ ಇದನ್ನು ಬಳಸಿಕೊಳ್ಳಬೇಕು ಅಂತ ಅವರು ಹೇಳಿದ್ದರು. ಉಳಿದಿದ್ದು ಕಲಾವಿದರಿಗೆ ಬಿಟ್ಟಿದ್ದು’ ಎಂದು ಸುಮಲತಾ ಅಂಬರೀಷ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 4:35 pm, Wed, 14 August 24