Video: ಸಿಂಹದ ಬಾಯಿಯಿಂದ ಜಸ್ಟ್ ಮಿಸ್, ಹೇಗಿತ್ತು ನೋಡಿ ಸಿಂಹ ಶ್ವಾನದ ಕಾದಾಟ
ಎರಡು ಸಿಂಹಗಳ ಜೊತೆ ಶ್ವಾನಗಳೆರಡು ಕಾದಾಟ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಘಟನೆಯ ಸಂಪೂರ್ಣ ದೃಶ್ಯ ಗೇಟಿನ ಮುಂಭಾಗದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋ ಇಲ್ಲಿದೆ ನೋಡಿ.
ಎರಡು ಸಿಂಹಗಳ ಜೊತೆ ಶ್ವಾನಗಳೆರಡು ಕಾದಾಟ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಘರ್ಜಿಸುತ್ತಾ ಬಂದ ಸಿಂಹಗಳೆರಡು ಶ್ವಾನಗಳ ಮೇಲೆ ಎರಗಲು ಮುಂದಾಗಿದ್ದು, ಆದರೆ ನಡುವಿನಲ್ಲಿ ಗೇಟ್ ಇದ್ದರಿಂದ ಏನು ಮಾಡಲು ಸಾಧ್ಯವಾಗಲಿಲ್ಲ. ಈ ಘಟನೆ ಗುಜರಾತ್‌ನ ಅಮ್ರೇಲಿಯಲ್ಲಿ ನಡೆದಿದೆ. ಈ ಪ್ರದೇಶ ಭಾರತದಲ್ಲಿ ಏಷ್ಯಾಟಿಕ್ ಸಿಂಹದ ನೆಲೆಯಾಗಿರುವ ಗಿರ್ ರಾಷ್ಟ್ರೀಯ ಉದ್ಯಾನವನದಿಂದ ಸುಮಾರು 76 ಕಿಮೀ ದೂರದಲ್ಲಿದೆ ಎಂದು ಹೇಳಲಾಗಿದೆ. ಘಟನೆಯ ಸಂಪೂರ್ಣ ದೃಶ್ಯ ಗೇಟಿನ ಮುಂಭಾಗದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗೇಟ್ ತೆಗೆಯಲು ಸಾಧ್ಯವಾಗದಿದ್ದರಿಂದ ಸಿಂಹಗಳೆರಡು ಬಲವಂತವಾಗಿ ಗೇಟ್ ಮುರಿಯಲು ಪ್ರಯತ್ನಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬಳಿಕ ವ್ಯಕ್ತಿಯೊಬ್ಬ ಟಾರ್ಚ್‌ಲೈಟ್ ಹಿಡಿದುಕೊಂಡು ಬಂದಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಾಯಿ ಮಾಡಿದ ಕಿತ್ತಾಪತಿಯಿಂದ ಹೊತ್ತಿ ಉರಿದ ಮನೆ; ವಿಡಿಯೋ ಇಲ್ಲಿದೆ ನೋಡಿ
Published On - 4:30 pm, Wed, 14 August 24