ತುಂಗಭದ್ರಾ ಜಲಾಶಯದಲ್ಲಿ ಸ್ಟಾಪ್ ಗೇಟ್ ಅಳವಡಿಸುವ ಕಾರ್ಯ ಶನಿವಾರ ಮುಗಿಯಲಿದೆ: ಜಮೀರ್ ಅಹ್ಮದ್
ಕಿತ್ತುಹೋಗಿರುವ ಜಲಾಶಯದ ಕ್ರೆಸ್ಟ್ ಗೇಟ್ ವೀಕ್ಷಿಸಲು ನಿನ್ನೆ ಅಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ಜಮೀರ್ ಅಹ್ಮದ್ ಸಹ ಇದ್ದರು. ಸಿದ್ದರಾಮಯ್ಯ ವಾಪಸ್ಸು ಹೋಗಿದ್ದಾರೆ ಮತ್ತು ಸಚಿವ ಇಲ್ಲೇ ಉಳಿದುಕೊಂಡಿರುವಂತಿದೆ. ಸ್ಟಾಪ್ ಗೇಟ್ ಅಳವಡಿಸುವವರೆಗೆ ಕೊಪ್ಪಳದಲ್ಲೇ ಇರುವಂತೆ ಸಿಎಂ ಹೇಳಿರಬಹುದು.
ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ ಕಿತ್ತುಹೋಗಿರುವ 19 ನೇ ಕ್ರೆಸ್ಟ್ ಗೇಟ್ ಜಾಗದಲ್ಲಿ ಹೊಸ ಸ್ಟಾಪ್ ಗೇಟನ್ನು ಜೋಡಿಸುವ ಕೆಲಸ ಇನ್ನೂ ಆರಂಭವಾಗಿಲ್ಲ. ಇವತ್ತು ಮಧ್ಯಾಹ್ನ ಗೇಟ್ ಗೆ ಪೂಜೆ ನೆರವೇರಿಸಲಾಗಿದ್ದು ಅಳವಡಿಕೆ ಕೆಲಸ ಸಾಯಂಕಾಲ ಆರಂಭವಾಗಲಿದೆಯೆಂದು ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ಹೇಳಿದರು. ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ ಜಮೀರ್, ಸ್ಟಾಪ್ ಗೇಟ್ ಜೋಡಿಸುವ ಕೆಲಸ ಇಂದು ಸಾಯಂಕಾಲ ಆರಂಭಗೊಳ್ಳಲಿದೆ ಮತ್ತು ಆಗಸ್ಟ್ 16 ಇಲ್ಲವೇ 17 ರವರೆಗೆ ಕೆಲಸ ಮುಗಿಸಿ ಕೊಡುವುದಾಗಿ ಗುತ್ತಿಗೆ ಪಡೆದಿರುವ ಸಂಸ್ಥೆಯ ಇಂಜಿನೀಯರ್ ಗಳು ಹೇಳಿರುವರೆಂದು ತಿಳಿಸಿದರು. ಜಲಾಶಯದಲ್ಲಿ ನೀರಿನ ಪ್ರಮಾಣ ಜಾಸ್ತಿ ಇರೋದ್ರಿಂದ ಗೇಟ್ ಜೋಡಿಸುವ ಕಾರ್ಯ ವಿಳಂಬಗೊಳ್ಳುತ್ತಿದೆ ಎಂದು ಹೇಳಿದ ಜಮೀರ್, ಜಲಾಶಯದಲ್ಲಿ ಸದ್ಯಕ್ಕೆ 93 ಟಿಎಂಸಿ ನೀರು ಇದೆ ಎಂದರು. ಕಟ್ ಆಗಿರುವ ಚೇನ್ ಲಿಂಕ್ ಅನ್ನು ದುರಸ್ತಿ ಮಾಡಬೇಕಾದರೆ ಜಲಾಶಯದಿಂದ 60 ಟಿಎಂಸಿ ನೀರನ್ನು ಹೊರಬಿಡಬೇಕಾಗುತ್ತದೆ, ಆದರೆ ಸ್ಟಾಪ್ ಗೇಟನ್ನು ಅಳವಡಿಕೆಯನ್ನು ನೀರು ಉಳಿಸಿಕೊಂಡೇ ಮಾಡಬಹುದು ಎಂದು ಜಮೀರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ತುಂಗಭದ್ರಾ ಜಲಾಶಯದಿಂದ ನೀರು ಹೊರಬಿಡುವ ಕಾರ್ಯ ಆರಂಭ, ಪ್ರವಾಹದ ಭೀತಿಯಲ್ಲಿ ಜನ