ಕಲಾವಿದರ ಸಂಘದ ಪೂಜೆ: ಮೈಮೇಲೆ ದೇವರು ಬಂದ ನಟಿ ಜ್ಯೋತಿ ಮಾತು
ಕನ್ನಡ ಚಿತ್ರರಂಗಕ್ಕೆ ಬಂದಿರುವ ಸಂಕಷ್ಟಗಳು ದೂರಾಗಲೆಂದು ಕಲಾವಿದರ ಸಂಘ ವಿಶೇಷ ಪೂಜೆಯನ್ನು ಮಾಡಿಸಿದರು. ಪೂಜೆಯ ಸಮಯದಲ್ಲಿ ನಟಿ ಜ್ಯೋತಿ ಮೈಮೇಲೆ ದೇವರು ಬಂದಂತೆ ಒದ್ದಾಡಿದರು. ಬಳಿಕ ತಮಗಾದ ಅನುಭವದ ಬಗ್ಗೆ ಮಾಹಿತಿ ಹಂಚಿಕೊಂಡರು.
ಕನ್ನಡ ಚಿತ್ರರಂಗಕ್ಕೆ ಬಂದಿರುವ ಕಂಟಕಗಳು ದೂರಾಗಲೆಂದು ಕಲಾವಿದರ ಸಂಘದ ವತಿಯಿಂದ ಇಂದು ಚಾಮರಾಜಪೇಟೆಯ ಕಚೇರಿಯಲ್ಲಿ ಪೂಜೆ ನಡೆಸಲಾಗಿದೆ. ಈ ಪೂಜೆಯಲ್ಲಿ ಹಲವು ನಟ-ನಟಿಯರು ಭಾಗಿಯಾಗಿದ್ದರು. ಪೂಜೆ ನಡೆಯುತ್ತಿರುವ ವೇಳೆ ನಟಿ ಜ್ಯೋತಿ ಅವರು ಇದ್ದಕ್ಕಿದ್ದಂತೆ ವಿಚಿತ್ರವಾಗಿ ಆಡಿದ್ದಾರೆ. ಅವರನ್ನು ಕೆಲವು ಸಹ ನಟಿಯರು ಹಿಡಿದುಕೊಂಡು ಬಳಿಕ ಅವರಿಗೆ ನೀರು ಕುಡಿಸಿ ಸಮಾಧಾನ ಮಾಡಿದ್ದಾರೆ. ಘಟನೆ ಬಳಿಕ ಟಿವಿ9 ಜೊತೆಗೆ ಮಾತನಾಡಿರುವ ನಟಿ ಜ್ಯೋತಿ, ತಮ್ಮ ಮೈಮೇಲೆ ದೇವರು ಬಂದಿತ್ತು ಎಂದಿದ್ದಾರೆ. ಅಲ್ಲದೆ ತಮಗೆ ಆಗಾಗ್ಗೆ ಹೀಗೆ ಆಗುತ್ತಿರುತ್ತದೆ ಎಂದು ಸಹ ಹೇಳಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos