ಗ್ಯಾರಂಟಿ ಯೋಜನೆಗಳಲ್ಲಿ ಯಾವುದನ್ನೂ ನಿಲ್ಲಿಸಲ್ಲ, ಕತ್ತರಿ ಹಾಕಲ್ಲ: ಡಿಕೆ ಶಿವಕುಮಾರ್
ಕ್ಷೇತ್ರಗಳ ಅಭಿವೃದ್ಧಿಗೆ ಆನುದಾನ ಬಿಡುಗಡೆಯಾಗುತ್ತಿಲ್ಲ ಅನ್ನೋದು ವಿಪಕ್ಷ ನಾಯಕರ ಸೃಷ್ಟಿ, ತಮ್ಮ ಸರ್ಕಾರ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿರುವುದು ಅವರಿಗೆ ಸಹಿಸಲಾಗದೆ ಕೈಹೊಸಕಿಕೊಳ್ಳುತ್ತಿದ್ದಾರೆ, ಅದೇ ಕಾರಣಕ್ಕೆ ಅನುದಾನ ಕೊರತೆಯ ನೆಪ ಮಾಡಿಕೊಂಡು ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರು: ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಮತ್ತು ರಾಜ್ಯದ ಆಭಿವೃದ್ಧಿ ಕೆಲಸಗಳಿಗೆ ಕಂಟಕವಾಗುತ್ತಿವೆಯೇ? ಅಭಿವೃದ್ಧಿ ಕೆಲಸಗಳಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲವೆಂದು ಸಚಿವರು ಮತ್ತು ಕಾಂಗ್ರೆಸ್ ಶಾಸಕರು ಬಹರಂಗವಾಗೇ ಹೇಳಲಾರಂಭಿಸಿರುವುದರಿಂದ ಅನುಮಾನಗಳು ಮೂಡೋದು ಸಹಜ. ಆದರೆ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸಂಗತಿ ಸುಳ್ಳು, ಸರ್ಕಾರ ಯಾವ ಯೋಜನೆಯನ್ನೂ ನಿಲ್ಲಿಸುವುದಿಲ್ಲ, ಬದಲಾವಣೆ ಮಾಡಲ್ಲ ಅಥವಾ ಕತ್ತರಿಯನ್ನು ಹಾಕಲ್ಲ, ಪಕ್ಷದ ಅಧ್ಯಕ್ಷನಾಗಿ ತಾನು ಈ ಮಾತು ಹೇಳುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಇದೇ ಮಾತನ್ನು ಹೇಳುತ್ತಾರೆ ಎಂದರು. ಯೋಜನೆಗಳಿಗೆ ಸಂಬಂಧಿಸಿದಂತೆ ಉದ್ಭವಿಸಿರುವ ಸಂಗತಿಯೇನೆಂದರೆ, ಶ್ರೀಮಂತರು ಅಂದರೆ ಆದಾಯ ತೆರಿಗೆ ಮತ್ತು ಜಿಎಸ್ ಟಿ ಪಾವತಿಸುವವರೂ ಅವುಗಳ ಲಾಭ ಪಡೆದುಕೊಳ್ಳುತ್ತಿದ್ದಾರೆ. ಇದನ್ನೆಲ್ಲ ನಿಲ್ಲಿಸಲು ತನಮ್ಮ ಸರ್ಕಾರ ಎಲ್ಲ ಯೋಜನೆಗಳ ಫಲಾನುಭವಿಗಳಿಗೆ ಗುರುತಿನ ಚೀಟಿ ನಿಡುವ ಬಗ್ಗೆ ಚಿಂತನೆ ನಡೆಸಿದೆ ಎಂದು ಶಿವಕುಮಾರ್ ಹೇಳಿದರು. ಗ್ಯಾರಂಟಿ ಯೋಜನೆಗಳಿಂದಾಗಿ ಸರ್ಕಾರ ಆರ್ಥಿಕವಾಗಿ ಸಶಕ್ತವಾಗುತ್ತಿದೆ, ಶಕ್ತಿ ಯೋಜನೆ ಹೊರತಾಗಿಯೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾವಿರಾರು ಬಸ್ಸುಗಳನ್ನು ಖರೀದಿಸಿದ್ದಾರೆ ಎಂದು ಡಿಸಿಎಂ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಲೂಟಿ ಮಾಡಿದ್ದು ಸಾಕು, ಹೆಚ್ಎಂಟಿ ಪುನಶ್ಚೇತನಕ್ಕೆ ಸಹಕಾರ ಕೊಡಿ: ಡಿಕೆ ಶಿವಕುಮಾರ್ಗೆ ಕುಮಾರಸ್ವಾಮಿ ಟಾಂಗ್