ಲೂಟಿ ಮಾಡಿದ್ದು ಸಾಕು, ಹೆಚ್​ಎಂಟಿ ಪುನಶ್ಚೇತನಕ್ಕೆ ಸಹಕಾರ ಕೊಡಿ: ಡಿಕೆ ಶಿವಕುಮಾರ್​ಗೆ ಕುಮಾರಸ್ವಾಮಿ ಟಾಂಗ್

ಬೆಂಗಳೂರಿನ ಹೆಚ್​ಎಂಟಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಲೂಟಿ ಮಾಡಿದ್ದು ಸಾಕು, ಹೆಚ್​ಎಂಟಿ ಪುನಶ್ಚೇತನಕ್ಕೆ ಸಹಕಾರ ಕೊಡಿ ಎಂದು ಕಿಡಿಕಾರಿದ್ದಾರೆ.

ಲೂಟಿ ಮಾಡಿದ್ದು ಸಾಕು, ಹೆಚ್​ಎಂಟಿ ಪುನಶ್ಚೇತನಕ್ಕೆ ಸಹಕಾರ ಕೊಡಿ: ಡಿಕೆ ಶಿವಕುಮಾರ್​ಗೆ ಕುಮಾರಸ್ವಾಮಿ ಟಾಂಗ್
ಹೆಚ್​ಡಿ ಕುಮಾರಸ್ವಾಮಿ
Follow us
Sunil MH
| Updated By: ಆಯೇಷಾ ಬಾನು

Updated on: Aug 13, 2024 | 3:07 PM

ಬೆಂಗಳೂರು, ಆಗಸ್ಟ್​.13: ನನ್ನ ಮೇಲೆ ದ್ವೇಷ ಮಾಡಿ ರಾಜ್ಯ ಹಾಳು ಮಾಡಿಕೊಳ್ಳಬೇಡಿ. ನಾನು ಈ ಕಾರ್ಖಾನೆಗೆ ಜೀವ ಕೊಡಬೇಕೆಂದು ಶ್ರಮ ಪಡುತ್ತಿದ್ದೇನೆ. ಸಾಕು ಲೂಟಿ ಮಾಡಿದ್ದು, ಸಹಕಾರ ಕೊಡಿ ಎಂದು ಹೆಚ್​ಎಂಟಿ ಪುನಶ್ಚೇತನಕ್ಕೆ ಸಹಕಾರ ಕೋರಿ ಹೆಚ್​ಡಿ ಕುಮಾರಸ್ವಾಮಿಯವರು (HD Kumaraswamy) ಡಿಕೆ ಶಿವಕುಮಾರ್ (DK Shivakumar) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ ಹೆಚ್​ಎಂಟಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಪುಟ್ಟೇನಹಳ್ಳಿ ಕೆರೆ ಮುಚ್ಚಾಕಿ ಡಾಲರ್ಸ್ ಕಾಲೋನಿ ಮಾಡುದ್ರು. ಯಾರ ಕಾಲದಲ್ಲಿ ನಾನು ಅಲ್ಲಿ ಮನೆಗಳಿಗೆ ನೀರು ನುಗ್ಗದಂತೆ ಕ್ರಮ ಕೈಗೊಂಡು ಮಾಡಿ ತೋರಿಸಿದೆ. ಆದರೆ ನೀವು ದಿನ ರೌಂಡ್ಸ್ ಮಾಡ್ತೀರಲ್ಲಾ, ಜನರಿಗೆ ಏನ್ ಮಾಡಿದ್ದೀರಾ? ಲಾಟರಿ ಸಿಸ್ಟಮ್​ನಲ್ಲೇ ಪ್ರತಿ ಬಾರಿಯೂ ನನಗೆ ಅಧಿಕಾರ ಸಿಕ್ಕಿದೆ. ಆ ಲಾಟರಿ ಅಧಿಕಾರದಲ್ಲೇ ಜನರಿಗೆ ಆದಷ್ಟು ಒಳ್ಳೇ ಕೆಲಸ ಮಾಡ್ತಿದ್ದೇನೆ. ಆದರೆ ನಿವೇನು ಮಾಡಿದ್ದೀರಿ ಎಂದು ಡಿ.ಕೆ.ಶಿವಕುಮಾರ್ ವಿರುದ್ದ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ವರ್ಷಕ್ಕೆ 120 ಕೋಟಿ ನಷ್ಟ ಆಗುತ್ತಿದೆ

ಹಲವಾರು ವರ್ಷಗಳಿಂದ ಲಾಭದಲ್ಲಿ ಇದ್ದ ಚಟುವಟಿಕೆಗಳು ಕಡಿಮೆ ಇತ್ತು. ನಾನು ಕಡತಕ್ಕೆ ಸಹಿ ಹಾಕಿದಕ್ಕೆ ಗೊಂದಲ ಮಾಡಿದ್ರು. ಕುಮಾರಸ್ವಾಮಿ ಪರಿಸರ ಹಾಳು ಮಾಡೋಕೆ ಹೊರಟಿದ್ದಾರೆ ಎಂದು ಹೇಳಿದ್ದಾರೆ. ಇದೇ ಸಿದ್ದರಾಮಯ್ಯ ಸರ್ಕಾರ ಸಂಡೂರಿನಲ್ಲಿ ದೇವದಾರದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದ್ದಾರೆ. ಹಿಂದೆ ಸರ್ಕಾರದಲ್ಲಿ ಯಾವ ಭೂಮಿ ಅನುಮತಿ ನೀಡಲು ಶಿಫಾರಸ್ಸು ಮಾಡಿದ್ರು. ಅಲ್ಲಿ ದೊಡ್ಡ ಮಟ್ಟದ ಮರಗಳಿಲ್ಲ. ಪರಿಸರ ರಕ್ಷಣೆಗೆ 192 ಕೋಟಿ ವರ್ಗಾವಣೆ ಮಾಡಿದ್ದಾರೆ. ಕೆಲವೊಂದು ತಾಂತ್ರಿಕ ತಪ್ಪುಗಳು ಆಗಿವೆ. ಅದನ್ನು ಸರಿಪಡಿಸಿಕೊಳ್ಳಲು ಸಂಸ್ಥೆ ರೆಡಿ ಇದೆ. ಅರಣ್ಯ ಸಚಿವರು ತಡೆಯಾಜ್ಞೆ ತರಲು ಟಿಪ್ಪಣಿ ಬಿಡುಗಡೆ ಮಾಡಿದ್ದಾರೆ. ವರ್ಷಕ್ಕೆ 120 ಕೋಟಿ ನಷ್ಟ ಆಗುತ್ತದೆ. ಅಲ್ಲಿನ ಕುಟುಂಬಗಳು ಬೀದಿಗೆ ಬರಲಿವೆ. ನಿನ್ನೆ ಈಶ್ವರ್ ಖಂಡ್ರೆ ಅವರು ಗದಾಪ್ರಹಾರ ಮಾಡೋಕೆ ಹೋಗಿದ್ದಾರೆ. ಇಲ್ಲಿ ಟಿಪ್ಪಣಿ ಸಹ ಕಳಿಸಿದ್ದಾರೆ ಎಂದು ಹೆಚ್​ಡಿಕೆ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಪೋನ್ ಟ್ಯಾಪಿಂಗ್, ಸಿಡಿ ಎಲ್ಲವನ್ನೂ ಬಿಜೆಪಿ ನಾಯಕರೇ ಮಾಡಿಸಿ ಬೇರೆಯವರ ಮೇಲೆ ಆರೋಪ ಹೊರಿಸುತ್ತಾರೆ: ಈಶ್ವರ್ ಖಂಡ್ರೆ

ಇನ್ನು ಮಾತು ಮುಂದುವರೆಸಿದ ಹೆಚ್​ಡಿಕೆ, ಹೆಚ್​ಎಂಟಿ ಕೈಗಾರಿಕೆಗೆ ಭೂಮಿ ಕೊಟ್ಟಿದ್ದಾರೆ ಅದನ್ನ ವಶಕ್ಕೆ ಪಡಿಸಿಕೊಳ್ಳಬೇಕು ಅಂತ ಹೇಳಿದ್ದಾರೆ. ಈ ಹೆಚ್​ಎಂಟಿಗೆ ಲ್ಯಾಂಡ್ ಯಾವ ರೀತಿ ಬಂತು? 1964ರಲ್ಲಿ ಹೆಚ್​ಎಂಟಿಯಿಂದ ಕಾರ್ಖಾನೆ ಆಗಬೇಕು. ಅವತ್ತು ನೆಹರು ಅವರು ಬಂದು ಕಾರ್ಖಾನೆ ಭೇಟಿ ನೀಡಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿ, ಮೈಸೂರು ಅರಸು ಎಲ್ಲರೂ ಭೇಟಿ ನೀಡಿದ್ದಾರೆ. ಇದಕ್ಕೆ ಇತಿಹಾಸ ಇದೆ. ನೆಹರು ಅವರ ಕಾಲದಲ್ಲಿ ಹೆಚ್​ಎಂಟಿ‌ ಆರಂಭ ಆಯ್ತು. ನೆಹರು ಕಾಲದಲ್ಲಿ ವಾಚ್ ಮತ್ತು ಬೆಲ್ಟ್ ತಯಾರು ಮಾಡಲು ಕಾರ್ಖಾನೆ ಆರಂಭವಾಗಿದ್ದು. ಪ್ರತಿ ವರ್ಷ ಹೊಸ ಯೂನಿಟ್ ಆರಂಭ ಮಾಡುತ್ತಿದ್ದರು. ಹೆಚ್​ಎಂಟಿಯಲ್ಲಿ 1970 ರಲ್ಲಿ 270 ಕೋಟಿ ವಾರ್ಷಿಕ ಆದಾಯ ಇತ್ತು. ಬಂದ ಲಾಭ ದಿಂದ ದೇಶದ ಹಲವು ಕಡೆ ಕಂಪನಿ ಸ್ಥಾಪನೆ ಮಾಡಲಾಯ್ತು, ಹೈದರಾಬಾದ್, ಜಾರ್ಖಾಂಡ್ ಕಾರ್ಖಾನೆಗಳು ನಡೆಯುತ್ತಿದ್ದವು. ನಿನ್ನೆ ಸಚಿವರು ಟಿಪ್ಪಣಿ ಬರೆದಿದ್ದು ಯಾವ ಕಾರಣಕ್ಕೆ? ಸಚಿವರು ಸೂಚನೆ ಕೊಟ್ಟ ಕೂಡಲೇ ಹೆಚ್​ಎಂಟಿ ಜಾಗ ವಶ ಪಡಿಸಿಕೊಳ್ಳಲು ಆಗುತ್ತಾ? 2020 ಡಿನೋಟಿಪೈ ಮಾಡಿದ್ದು ಯಾರು? ನಾನು ಹೆಚ್​ಎಂಟಿ ಕಾರ್ಖಾನೆಗೆ ಭೇಟಿ ಕೊಟ್ಟು ಅದನ್ನು ಉಳಿಸಬೇಕು ಎಂದು ಕೆಲ ನಿರ್ಧಾರ ತೆಗೆದುಕೊಂಡು ನನ್ನ ರೀತಿಯಲ್ಲಿ ನಾನು ಶ್ರಮ ಹಾಕುತ್ತಿದ್ದೇನೆ ಎಂದರು.

ಕುಮಾರಸ್ವಾಮಿ ಹೆಚ್‌ಎಂಟಿ ಕಾರ್ಖಾನೆಗೆ ಭೇಟಿ ಕೊಟ್ಟ ಅನ್ನೋ ಕಾರಣಕ್ಕೆ ಈ ರೀತಿ ಅಡ್ಡಗಾಲು ಹಾಕಲಾಗಿದೆ. ವಿಶ್ವೇಶ್ವರಯ್ಯ ಕನಸಿನ ಕಾರ್ಖಾನೆ ಉಳಿಸಬೇಕೆಂದು ನಾನು ಶ್ರಮ ಹಾಕುತ್ತಿದ್ದೇನೆ. ಹೆಚ್‌ಎಂಟಿಗೆ 599 ಎಕರೆ ಜಮೀನನ್ನ ಸರ್ಕಾರ ಪುಕ್ಕಟೆ ಕೊಟ್ಟಿಲ್ಲ. ನಾನು ಕರೆ ಮಾಡಿದ ಅಧಿಕಾರಿಗಳು ಎಲ್ಲಾ ದಾಖಲೆಗಳನ್ನ ತೆಗೆದಿಟ್ಟಿದ್ದಾರೆ. 1963 ಡಿಸೆಂಬರ್ 4 ರಂದು 4.40 ಲಕ್ಷ ಹಣ ಕಟ್ಟಲಾಗಿದೆ. ಮಂಜೂರಾದ ಜಮೀನಿಗೆ ದುಡ್ಡು ಕಟ್ಟಿದ್ದಾರೆ, ಪುಕ್ಕಟೆ ತೆಗೆದುಕೊಂಡಿಲ್ಲ. ನಾನು ಜಸ್ಟ್ ಎಂಟ್ರಿಯಾಗಿದ್ದಕ್ಕೆ 45 ರೂ ಇದ್ದ ಶೇರ್ ವ್ಯಾಲ್ಯೂ 92ಕ್ಕೆ ಏರಿಕೆ ಮಾಡಲಾಗಿದೆ. ಯಾರಿಗೆ ಕೊಡಲಿಕ್ಕೆ ತರಾತುರಿ ಆದೇಶ ಮಾಡಿದ್ದೀರಿ ಈಶ್ವರ್ ಖಂಡ್ರೆ? ಖಾಲಿ ಜಾಗ ತಕ್ಷಣ ವಶಪಡಿಸಿಕೊಳ್ಳಿ ಎಂದು ಅಧಿಕಾರಿಗಳಿ ಹೇಳಿದ್ದಾರೆ ಎಂದು ಖಂಡ್ರೆ ವಿರುದ್ಧ ಗುಡುಗಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ