ತುಂಗಭದ್ರಾ ಜಲಾಶಯಕ್ಕೆ ಬದಲೀ ಕ್ರೆಸ್ಟ್ ಗೇಟ್ ಅಳವಡಿಸುವ ಕಾರ್ಯ ಇಂದು ಸಾಯಂಕಾಲದಿಂದ ಆರಂಭ

ತುಂಗಭದ್ರಾ ಜಲಾಶಯಕ್ಕೆ ಬದಲೀ ಕ್ರೆಸ್ಟ್ ಗೇಟ್ ಅಳವಡಿಸುವ ಕಾರ್ಯ ಇಂದು ಸಾಯಂಕಾಲದಿಂದ ಆರಂಭ
ಅರುಣ್​ ಕುಮಾರ್​ ಬೆಳ್ಳಿ
|

Updated on: Aug 13, 2024 | 3:30 PM

ಇಂದು ಬೆಳಗ್ಗೆಯಿಂದ ಜಲಾಶಯದಿಂದ ನೀರನ್ನು ಖಾಲಿ ಮಾಡುವ ಕೆಲಸ ಆರಂಭವಾಗಿದೆ. ಟಿಬಿ ಡ್ಯಾಂನಲ್ಲಿ 103 ಟಿಎಂಸಿ ನೀರು ಸಂಗ್ರಹವಾಗಿತ್ತು ಮತ್ತು ಕ್ರೆಸ್ಟ್ ಗೇಟ್ ಗಳ ಮೂಲಕ ಸುಮಾರು 60 ಟಿಎಂಸಿ ನೀರನ್ನು ನದಿಗಳಿಗೆ ಹರಿಬಿಡಬೇಕಿದೆ. ಜಲಾಶಯದಲ್ಲಿ ಕನಿಷ್ಠ 50ಟಿಎಂಸಿ ನೀರನ್ನು ಉಳಿಸಿಕೊಳ್ಳುವಂತೆ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತುಂಗಭದ್ರಾ ನಿಗಮಕ್ಕೆ ಸೂಚನೆ ನೀಡಿದ್ದಾರೆ.

ಹೊಸಪೇಟೆ: ತುಂಗಭದ್ರಾ ಜಲಾಶಯದ 19ನೇ ಕ್ರೆಸ್ಟ್ ಗೇಟ್ ಮುರಿದು ನೀರಿನಲ್ಲಿ ಕೊಚ್ಚಿಕೊಂಡು ಹೋದ ನಂತರ ಸೃಷ್ಟಿಯಾಗಿರುವ ಎಲ್ಲ ವಿದ್ಯಮಾನಗಳನ್ನು ನಾವು ವರದಿ ಮಾಡುತ್ತಿದ್ದೇವೆ. ಡ್ಯಾಂನ ಮುರಿದು ಹೋಗಿರುವ ಕ್ರೆಸ್ಟ್ ಗೇಟ್ ಜಾಗದಲ್ಲಿ ಹೊಸದನ್ನು ಅಳವಡಿಸುವ ಕೆಲಸ ಇಂದು ಸಾಯಂಕಾಲದಿಂದ ಆರಂಭವಾಗಲಿದೆ ಮತ್ತು ಅದನ್ನು ಹೇಗೆ ಅಳವಡಿಸಲಾಗುತ್ತದೆ ಮತ್ತು ಗೇಟ್ ಗಳನ್ನು ಹೇಗೆ ಆಪರೇಟ್ ಮಾಡಲಾಗುತ್ತದೆ ಅನ್ನೋದನ್ನು ನಮ್ಮ ವರದಿಗಾರ ದ ಇಲ್ಲಿ ವಿವರಿಸಿದ್ದಾರೆ. ಚೇನ್ ಲಿಂಕ್ ಕಟ್ ಆಗಿದ್ದಕ್ಕೆ 19 ನೇ ಕ್ರೆಸ್ಟ್ ಗೇಟ್ ಕೊಚ್ಚಿಕೊಂಡು ಹೋದ ಸಂಗತಿ ಎಲ್ಲರಿಗೂ ಗೊತ್ತಿರುವಂಥದ್ದೇ. ಚೇನನ್ನು ದೃಶ್ಯಗಳಲ್ಲಿ ನೋಡಬಹುದು, ಈ ಚೇನ್ ಗಳ ನೆರವಿನಿಂದ ಗೇಟ್ ಗಳನ್ನು ಓಪನ್ ಮತ್ತು ಮುಚ್ಚುವ ಕೆಲಸ ಮಾಡಲಾಗುತ್ತೆ. ಇನ್ನು ಹೊಸ ಗೇಟ್ ಅಳವಡಿಸುವ ಕೆಲಸವನ್ನು ಎರಡು ಸ್ಥಳೀಯ ಇಂಜಿನೀಯರಿಂಗ್ ಸಂಸ್ಥೆಗಳಿಗೆ ನೀಡಲಾಗಿದ್ದು ಕ್ರೇನ್ ಗಳ ಮೂಲಕ ಅದನ್ನು ಮಾಡಲಾಗುವುದು ಎಂದು ನಮ್ಮ ವರದಿಗಾರ ಹೇಳುತ್ತಾರೆ. ಅದರೆ ಜಲಾಶಯದಲ್ಲಿ ಇನ್ನೂ ಸಾಕಷ್ಟು ನೀರು ಇರೋದ್ರಿಂದ ಕ್ರೇನ್ ಗಳನ್ನು ಬಳಸಿ ಮತ್ತು ಗೇಟ್ ನ 5 ಪ್ಲೇಟ್ ಗಳನ್ನು ಜೋಡಿಸುವುದು ಬೃಹತ್ ಸವಾಲಿನ ಕೆಲಸವಾಗಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ತುಂಗಭದ್ರಾ ಜಲಾಶಯ ಖಾಲಿಯಾದ್ರೆ ನಾಲ್ಕು ಜಿಲ್ಲೆ ಜನರಿಗೆ ಸಂಕಷ್ಟ, ಆಂಧ್ರಕ್ಕೂ ಇದೇ ಪಾಲು

Follow us
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಒಬ್ಬ ಬೌಲರ್ ಮುಂದೆ ಶರಣಾದ ಇಡೀ ಕೇರಳ ತಂಡ
ಒಬ್ಬ ಬೌಲರ್ ಮುಂದೆ ಶರಣಾದ ಇಡೀ ಕೇರಳ ತಂಡ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ
ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್​'ಗಾರ್ಡ
ಕೇಂದ್ರದ ವಿಶೇಷ ವಿಮಾನ ಚೀನಾ ಕಳಿಸಿ ಪಿಪಿಈ ಕಿಟ್ ತರಿಸಲಾಗಿತ್ತು: ಸುಧಾಕರ್
ಕೇಂದ್ರದ ವಿಶೇಷ ವಿಮಾನ ಚೀನಾ ಕಳಿಸಿ ಪಿಪಿಈ ಕಿಟ್ ತರಿಸಲಾಗಿತ್ತು: ಸುಧಾಕರ್
ಮುಸ್ಲಿಮರ ಕೊಲ್ಲುವಂತಹ ದಿನ ಬರುತ್ತದೆ ಎಂದ ಈಶ್ವರಪ್ಪ ವಿರುದ್ಧ ಕೇಸ್ ಬುಕ್​!
ಮುಸ್ಲಿಮರ ಕೊಲ್ಲುವಂತಹ ದಿನ ಬರುತ್ತದೆ ಎಂದ ಈಶ್ವರಪ್ಪ ವಿರುದ್ಧ ಕೇಸ್ ಬುಕ್​!