ಹೆಚ್​ಎಂಟಿ ಮತ್ತು ವಿಐಎಸ್​ಎಲ್ ಸಂಸ್ಥೆಗಳನ್ನು ಪುನಶ್ಚೇತನಗೊಳಿಸಲು ಕುಮಾರಸ್ವಾಮಿ ಕಟಿಬದ್ಧರೇ?

ಹೆಚ್​ಎಂಟಿ ಮತ್ತು ವಿಐಎಸ್​ಎಲ್ ಸಂಸ್ಥೆಗಳನ್ನು ಪುನಶ್ಚೇತನಗೊಳಿಸಲು ಕುಮಾರಸ್ವಾಮಿ ಕಟಿಬದ್ಧರೇ?

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 13, 2024 | 5:34 PM

ಬೆಂಗಳೂರಲ್ಲಿರುವ ಹೆಚ್​ಎಂಟಿ ಕಂಪನಿ ಮತ್ತು ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಸ್ಥಾವರವನ್ನು (ವಿಐಎಸ್ ಎಲ್) ಪುನಶ್ಚೇತನಗೊಳಿಸುವ ಬಗ್ಗೆ ಕುಮಾರಸ್ವಾಮಿಯವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜೊತೆ ಚರ್ಚೆ ನಡೆಸಿದ್ದಾರಂತೆ. ಇವೆರೆಡು ಪುನರಾರಂಭಗೊಂಡರೆ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುವುದು ನಿಶ್ಚಿತ.

ಬೆಂಗಳೂರು: ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್ ಡಿ ಕುಮಾರಸ್ವಾಮಿ ರಾಜ್ಯದಲ್ಲಿ ಮುಚ್ಚಿಹೋಗಿರುವ ಕೆಲ ಖ್ಯಾತ ಸಂಸ್ಥೆಗಳಿಗೆ ಮರುಜೀವ ನೀಡಲು ಸಂಕಲ್ಪ ಮಾಡಿಕೊಂಡಿರುವಂತಿದೆ. ಆವುಗಳಲ್ಲಿ ಹೆಚ್​ಎಂಟಿ ಕೂಡ ಒಂದು. ಇಂದು ಹೆಚ್​ಎಂಟಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಜಾರ್ಖಂಡ್ ರಾಜ್ಯದ ಖಾಂಡ್ವಾ ಸಂಸದರೊಬ್ಬರು ಅವರಿಗೆ ಹೆಚ್​ಎಂಟಿ ಕೈಗಡಿಯಾರಗಳನ್ನು ಉಡುಗೊರೆಯಾಗಿ ನೀಡಿರುವುದನ್ನು ತೋರಿಸಿದರು. ಖಾಂಡ್ವಾದಲ್ಲಿ ಕಾರ್ಖಾನೆಯೊಂದು ಮುಚ್ಚಿ ಹೋಗಿದ್ದು ಅದರಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ನೌಕರರು ಧರಣಿ ನಡೆಸುತ್ತಿದ್ದಾರಂತೆ. ಕುಮಾರಸ್ವಾಮಿಯವರು ಹೆಚ್​ಎಂಟಿ ಕಾರ್ಖಾನೆ ಮುಚ್ಚಿಹೋಗಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತಾರೆ ಮತ್ತು ಅದರ ಬಗ್ಗೆ ಮಾತಾಡುವಾಗ ಭಾವುಕರೂ ಆಗುತ್ತಾರೆ. ಹೆಚ್​ಎಂಟಿ ಕಾರ್ಖಾನೆ ಮುಚ್ಚುವಂತಾಗಲು ಯಾರು ಕಾರಣರೋ ಅಂತ ಜನರಿಗೆ ಗೊತ್ತಿಲ್ಲ, ಅದನ್ನು ತಿಳೀಸುವ ಪ್ರಯತ್ನವನ್ನು ಕುಮಾರಸ್ವಾಮಿ ಮಾಡದೆ ಈಗಿನ ಸರ್ಕಾರವನ್ನು ದೂಷಿಸುತ್ತಾರೆ. ಕಂಪನಿಯು ಸಂಪೂರ್ಣವಾಗಿ ಬಾಗಿಲು ಹಾಕಿದ್ದು 2016ರಲ್ಲ. 2018ರಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದರು, ಆಗ ಅವರಿಗೆ ಹೆಚ್​ಎಂಟಿ ಕಂಪನಿಯನ್ನು ಪುನಶ್ಚೇತನಗೊಳಿಸುವ ಇಚ್ಛೆ ಹುಟ್ಟಿಕೊಳ್ಳಲಿಲ್ಲವೇ ಅನ್ನೋದು ಕನ್ನಡಿಗರ ಪ್ರಶ್ನೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸಿದ್ದರಾಮಯ್ಯ ಮತ್ತು ಹೆಚ್ ಡಿ ಕುಮಾರಸ್ವಾಮಿ ಪರಸ್ಪರ ಎದುರಾದ ಸಂದರ್ಭ ಹೇಗಿತ್ತು ಗೊತ್ತಾ?