Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಮತ್ತು ಹೆಚ್ ಡಿ ಕುಮಾರಸ್ವಾಮಿ ಪರಸ್ಪರ ಎದುರಾದ ಸಂದರ್ಭ ಹೇಗಿತ್ತು ಗೊತ್ತಾ?

ಸಿದ್ದರಾಮಯ್ಯ ಮತ್ತು ಹೆಚ್ ಡಿ ಕುಮಾರಸ್ವಾಮಿ ಪರಸ್ಪರ ಎದುರಾದ ಸಂದರ್ಭ ಹೇಗಿತ್ತು ಗೊತ್ತಾ?

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 03, 2024 | 2:03 PM

ಕುಮಾರಸ್ವಾಮಿ ನಮಸ್ಕರಿಸಿದ್ದು ಕಾಣಿಸಲ್ಲ ಅದರೆ ಅವರು ಸಿದ್ದರಾಮಯ್ಯ ಕಡೆ ನೋಡೋದು ಮಾತ್ರ ಕಾಣಿಸುತ್ತದೆ. ಅವರ ಹಿಂದೆ ಬರುವ ಜಿಟಿ ದೇವೇಗೌಡ, ಟಿಎ ಸರವಣ ಮತ್ತು ಬೇರೆ ನಾಯಕರು ಮುಖ್ಯಮಂತ್ರಿಯವರಿಗೆ ಎರಡೂ ಕೈ ಜೋಡಿಸಿ ನಮಸ್ಕರಿಸುತ್ತಾರೆ. ಒಬ್ಬ ಮುಖಂಡ ಸಿದ್ದರಾಮಯ್ಯರ ಪಾದ ಕೂಡ ಮುಟ್ಟುತ್ತಾರೆ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಪರಸ್ಪರ ಎದುರಾದಾಗ ಸನ್ನಿವೇಶ ಹೇಗಿರುತ್ತದೆ? ಅಂಥದೊಂದು ಸಂದರ್ಭ ಇವತ್ತು ವಿಧಾನ ಪರಿಷತ್ ಚುನಾವಣೆಗೆ (MLC polls) ನಾಮಪತ್ರಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಚುನಾವಣಾಧಿಕಾರಿ ಕಚೇರಿ ಮುಂದೆ ಸೃಷ್ಟಿಯಾಗಿತ್ತು. ತಮ್ಮ ಪಕ್ಷದ ಅಭ್ಯರ್ಥಿಗಳ ಪರ ನಾಮಪತ್ರ ಸಲ್ಲಿಸಲು ಕಚೇರಿಯೊಳಗೆ ಹೋಗಿದ್ದ ಕುಮಾರಸ್ವಾಮಿ ಹೊರಬರೋವರೆಗೆ ಸಿದ್ದರಾಮಯ್ಯ ತಮ್ಮ ಪಕ್ಷದ ನಾಯಕರೊಂದಿಗೆ ಹೊರಗಡೆ ಕಾಯುತ್ತಿದ್ದರು. ಕುಮಾರಸ್ವಾಮಿ ಹೊರಬಂದಾಗ ಗೋಡೆಗೆ ಒರಗಿಕೊಂಡಿದ್ದ ಸಿದ್ದರಾಮಯ್ಯ ಎತ್ತಲೋ ಬೇಡವೋ ಅನ್ನುವಂತೆ ಕೈಯೆತ್ತುತ್ತಾರೆ. ಕುಮಾರಸ್ವಾಮಿ ನಮಸ್ಕರಿಸಿದ್ದು ಕಾಣಿಸಲ್ಲ ಅದರೆ ಅವರು ಸಿದ್ದರಾಮಯ್ಯ ಕಡೆ ನೋಡೋದು ಮಾತ್ರ ಕಾಣಿಸುತ್ತದೆ. ಅವರ ಹಿಂದೆ ಬರುವ ಜಿಟಿ ದೇವೇಗೌಡ, ಟಿಎ ಸರವಣ ಮತ್ತು ಬೇರೆ ನಾಯಕರು ಮುಖ್ಯಮಂತ್ರಿಯವರಿಗೆ ಎರಡೂ ಕೈ ಜೋಡಿಸಿ ನಮಸ್ಕರಿಸುತ್ತಾರೆ. ಒಬ್ಬ ಮುಖಂಡ ಸಿದ್ದರಾಮಯ್ಯರ ಪಾದ ಕೂಡ ಮುಟ್ಟುತ್ತಾರೆ. ಸಿಎಂ ಮತ್ತು ದೇವೇಗೌಡ ನಡುವೆ ಆತ್ಮೀಯ ಮಾತುಕತೆ ನಡೆಯತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Election Results 2024 Live: ಕರ್ನಾಟಕದಲ್ಲಿ 15-20 ಸ್ಥಾನ ಗೆಲ್ಲುತ್ತೇವೆ; ಸಿದ್ದರಾಮಯ್ಯ