Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ: ಮಾಜಿ ಸಂಸದ ಕರಡಿ ಸಂಗಣ್ಣ ಮನೆಯಲ್ಲಿ ರೊಟ್ಟಿ ಊಟ ಸವಿದ ಸಿಎಂ ಸಿದ್ದರಾಮಯ್ಯ

ಕೊಪ್ಪಳ: ಮಾಜಿ ಸಂಸದ ಕರಡಿ ಸಂಗಣ್ಣ ಮನೆಯಲ್ಲಿ ರೊಟ್ಟಿ ಊಟ ಸವಿದ ಸಿಎಂ ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on:Aug 13, 2024 | 6:44 PM

ತುಂಗಭದ್ರಾ ಜಲಾಶಯದ ಬಳಿ ಸಿಎಂ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಜೊತೆಯಲ್ಲಿ ಸಚಿವರಾದ ಬಿಜೆಡ್ ಜಮೀರ್ ಅಹ್ಮದ ಖಾನ್, ಶಿವರಾಜ್ ತಂಗಡಗಿ ಶಾಸಕ ಅಜಯ್ ಸಿಂಗ್ ಮೊದಲಾದವರು ಕಾಣಿಸಿದ್ದರು. ಆದರೆ ಕರಡಿ ಸಂಗಣ್ಣ ಮನೆಯಲ್ಲಿ ಸಿದ್ದರಾಮಯ್ಯ ಜೊತೆ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮಾತ್ರ ಕಾಣಿಸಿದರು.

ಕೊಪ್ಪಳ: ಟಿಬಿ ಡ್ಯಾಂ ವೀಕ್ಷಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರೊಂದಿಗಿದ್ದ ಕೆಲ ಮಂತ್ರಿ ಮತ್ತು ಶಾಸಕರಿಗೆ ಮಾಜಿ ಸಂಸದ ಕರಡಿ ಸಂಗಣ್ಣ ಅವರ ಮನೆಯಲ್ಲಿ ಜೋಳದ ರೊಟ್ಟಿ ಊಟದ ಭರ್ಜರಿ ಔತಣ ಏರ್ಪಡಿಸಲಾಗಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ನಾಗರ ಪಂಚಮಿ ದೊಡ್ಡ ಹಬ್ಬ ಮತ್ತು ಜನ ಅದನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಮೊನ್ನೆಯಷ್ಟೆ ಹಬ್ಬವನ್ನು ಆಚರಿಸಲಾಯಿತು. ಸ್ಥಿತಿವಂತರ ಮನೆಯಲ್ಲಿ ಹಬ್ಗಕ್ಕಾಗಿ ಬಗೆಬಗೆಯ ಲಾಡುಗಳನ್ನು ತಯಾರಿಸುತ್ತಾರೆ. ಸಿದ್ದರಾಮಯ್ಯ ಊಟ ಮಾಡುತ್ತಿರುವ ಡೈನಿಂಗ್ ಟೇಬಲ್ ಮೇಲೆ ಲಾಡುಗಳನ್ನು ಕಾಣಬಹುದು. ಸಿದ್ದರಾಮಯ್ಯನವರ ವಿಶೇಷತೆ ಎಂದರೆ ಅವರು ಎಲ್ಲ ಬಗೆಯ ಊಟವನ್ನು ಇಷ್ಟಪಟ್ಟು ಸೇವಿಸುತ್ತಾರೆ. ಉತ್ತರ ಕರ್ನಾಟಕಕ್ಕೆ ಬಂದರೆ ರೊಟ್ಟಿ ಊಟ, ಕರಾವಳಿ ಪ್ರಾಂತ್ಯಕ್ಕೆ ಹೋದರೆ ಮೀನೂಟ , ತಮ್ಮ ಮನೆಯಲ್ಲಿ ಮುದ್ದೆ, ಜಮೀರ್ ಅಹ್ಮದ್ ಮನೆಯಲ್ಲಿ ಬಿರಿಯಾನಿ ಮತ್ತು ಕೆಬಾಬ್- ಎಲ್ಲವೂ ಸೈ! ಉತ್ತರ ಕರ್ನಾಟಕದ ಜನರ ಊಟದಲ್ಲಿ ಖಾರದ ಪ್ರಮಾಣ ಜಾಸ್ತಿ ಮಾರಾಯ್ರೇ. ಆದರೆ ಸಿದ್ದರಾಮಯ್ಯ ಅದಕ್ಕೂ ಒಗ್ಗಿಕೊಳ್ಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಟಿಬಿ ಡ್ಯಾಂ: ಬಿಜೆಪಿ ಆರೋಪಗಳ ಬಗ್ಗೆ ಪ್ರಶ್ನೆ ಕೇಳಿದರೆ ಉತ್ತರಿಸುವುದಿಲ್ಲ ಎಂದು ಸಿಟ್ಟಾದ ಸಿಎಂ ಸಿದ್ದರಾಮಯ್ಯ

Published on: Aug 13, 2024 06:27 PM